ನವದೆಹಲಿ: ಮಲೇರಿಯಾ ಪ್ರಕರಣಗಳು ಮತ್ತು ಸಂಬಂಧಿತ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಭಾರತದ ಗಮನಾರ್ಹ ಸಾಧನೆಯನ್ನು ವಿಶ್ವ ಆರೋಗ್ಯ ಸಂಸ್ಥೆ (WHO) ಕೊಂಡಾಡಿದೆ.
ವಿಶ್ವ ಆರೋಗ್ಯ ಸಂಸ್ಥೆ ವಿಶ್ವ ಮಲೇರಿಯಾ ವರದಿ 2024, ಭಾರತದಲ್ಲಿ ಮಲೇರಿಯಾ ಕಡಿಮೆ ಮಾಡುವಲ್ಲಿ ಸಮುದಾಯ ಆರೋಗ್ಯ ಕಾರ್ಯಕರ್ತರ ಕೊಡುಗೆಗಳನ್ನು ಶ್ಲಾಘಿಸಿದೆ, ವಿಶೇಷವಾಗಿ ಮಹಿಳಾ ಆರೋಗ್ಯ ಕಾರ್ಯಕರ್ತರ ಶ್ರಮವನ್ನು ಶ್ಲಾಘಿಸಿದೆ. ದೂರದ ಪ್ರದೇಶಗಳಲ್ಲಿ ಪರಿಣಾಮಕಾರಿಯಾಗಿ ಮಲೇರಿಯಾವನ್ನು ಕಡಿಮೆ ಮಾಡುತ್ತಿದ್ದಾರೆ ಎಂದಿದೆ. ಮುಖ್ಯವಾಗಿ ಮಹಿಳೆಯರನ್ನು ಒಳಗೊಂಡಿರುವ ಭಾರತದದ ಸಮುದಾಯ ಆರೋಗ್ಯ ಕಾರ್ಯಕರ್ತರು ದೂರದ ಜನರನ್ನು ಹೇಗೆ ತಲುಪುತ್ತಿದ್ದಾರೆ ಮತ್ತು ಮಲೇರಿಯಾ ಪ್ರಕರಣಗಳು ಮತ್ತು ಸಾವುಗಳನ್ನು ಗಣನೀಯವಾಗಿ ಹೇಗೆ ಕಡಿಮೆ ಮಾಡುತ್ತಿದ್ದಾರೆ ಎಂಬುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವರದಿಯ ಪ್ರಕಾರ, ರಾಷ್ಟ್ರವ್ಯಾಪಿ, ಭಾರತದಲ್ಲಿ ಅಂದಾಜು ಮಲೇರಿಯಾ ಪ್ರಕರಣಗಳ ಸಂಖ್ಯೆ 2017 ರಲ್ಲಿ ಇದ್ದ 6.4 ಮಿಲಿಯನ್ನಿಂದ 2023 ರಲ್ಲಿ ಸುಮಾರು 2 ಮಿಲಿಯನ್ಗಳಿಗೆ ಕಡಿಮೆಯಾಗಿದೆ, ಇದು 69 ಶೇಕಡಾ ಇಳಿಕೆ. ಅಂತೆಯೇ, ಇದೇ ಅವಧಿಯಲ್ಲಿ ಅಂದಾಜು ಮಲೇರಿಯಾ ಸಾವುಗಳು 11,100 ರಿಂದ 3,500 ಕ್ಕೆ ಇಳಿದಿವೆ, ಇದು 68 ಪ್ರತಿಶತದಷ್ಟು ಇಳಿಕೆ.
ಆಫ್ರಿಕಾವು ಜಾಗತಿಕ ಮಲೇರಿಯಾ ಸಾವುಗಳಲ್ಲಿ 95 ಪ್ರತಿಶತವನ್ನು ಹೊಂದಿದೆ, ಮಕ್ಕಳು ಹೆಚ್ಚು ಬಲಿಯಾಗುತ್ತಿದ್ದಾರೆ ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.