ಬೆಂಗಳೂರು : ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಪೋಷಿಸುವ ‘ಉತ್ತಮನಾಗು-ಉಪಕಾರಿಯಾಗು’ ಎಂಬ ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರುವ ಬೃಹತ್ ಯುವ ಅಭಿಯಾನ ‘ವಿವೇಕ್ ಬ್ಯಾಂಡ್-2018′ ಇದೇ ಬರುವ ಜನವರಿ 12 ರಿಂದ 26ರವರೆಗೆ ರಾಜ್ಯಾದ್ಯಂತ ನಡೆಯಲಿದೆ.
ಜನವರಿ 12, 2018 ರಂದು ಸ್ವಾಮಿ ವಿವೇಕಾನಂದರ 155ನೇ ಜಯಂತಿ ಮತ್ತು ರಾಷ್ಟೀಯ ಯುವ ದಿನದ ಅಂಗವಾಗಿ ರಾಜ್ಯದಾದ್ಯಂತ ವಿವೇಕ್ ಬ್ಯಾಂಡ್ ಅಭಿಯಾನಕ್ಕೆ ಚಾಲನೆ ದೊರೆಯಲಿದೆ. ಯುವಕ- ಯುವತಿಯರು ತಮ್ಮ ಬಲಗೈಗೆ ವಿವೇಕ್ಬ್ಯಾಂಡ್ನ್ನು ಧರಿಸಲಿದ್ದು, ವಿವೇಕಾನಂದರು ಯುವಜನರಿಗೆ ನೀಡಿದ `ಉತ್ತಮನಾಗು-ಉಪಕಾರಿಯಾಗು’ (BE GOOD DO GOOD) ಎಂಬ ಸಂದೇಶವನ್ನು ತಾವು ಪಾಲನೆ ಮಾಡುವ ಸಂಕಲ್ಪ ತೊಡಲಿದ್ದಾರೆ. ವಿವೇಕ್ ಬ್ಯಾಂಡ್ ಕೈಯಲ್ಲಿ ಧರಿಸುವುದರೊಂದಿಗೆ ಜನವರಿ 12, 2018 ರಿಂದ 26 ಜನವರಿ 2018 ರ ವರೆಗೆ 2 ವಾರ ನಡೆಯಲಿರುವ ಈ ಬೃಹತ್ ಯುವ ಅಭಿಯಾನದಲ್ಲಿ ಸುಮಾರು 12 ಲಕ್ಷ ಯುವಕ- ಯುವತಿಯರು ಭಾಗವಹಿಸಲಿದ್ದಾರೆ.
ಬೆಂಗಳೂರಿನ ಸಾಮಾಜಿಕ ಸಂಸ್ಥೆ ‘ಸಮರ್ಥ ಭಾರತ’ ಈ ಯುವ ಅಭಿಯಾನವನ್ನು ಆಯೋಜಿಸಿದೆ.
ಈ ವರ್ಷ ವಿವೇಕ್ ಬ್ಯಾಂಡ್ ಅಭಿಯಾನವು
- ಖಾದಿ ಧರಿಸಿ.
- ಗಿಡವೊಂದನ್ನು ಪೋಷಿಸಿ.
- ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಿ
ಕುರಿತು ಜಾಗೃತಿಯನ್ನು ಮೂಡಿಸಿ, ಯುವಜನರು ಸಾಮಾಜಿಕವಾಗಿ ಉಪಯೋಗವಾಗುವ ಸೇವಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದೆ.
ಸ್ಮೃತಿ ಇರಾನಿ, ಕೇಂದ್ರ ಸಚಿವರು, ಭಾರತ ಸರಕಾರ
ಡಾ|| ಡಿ.ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು ಧರ್ಮಸ್ಥಳ ದೇವಸ್ಥಾನ
ಪೂಜ್ಯ ಶ್ರೀ ನಿರ್ಮಲನಂದನಾಥ ಸ್ವಾಮೀಜಿ, ಆದಿಚುಂಚನಗಿರಿ ಮಠ
ಶ್ರೀ ಶ್ರೀ ರವಿಶಂಕರ್ ಗುರೂಜಿ, ಆರ್ಟ್ ಆಫ್ ಲಿವಿಂಗ್
ಲಕ್ಷ್ಮಿ ಗೋಪಾಲಸ್ವಾಮಿ, ನಟಿ
ಮೇಜರ್ ಭಾವನಾ ಚಿರಂಜಯ್
ಅನಿರುದ್ಧ್, ನಟ
ಡಾ ಬಿ ಎನ್ ಗಂಗಾಧರ್, ನಿಮ್ಹಾನ್ಸ್ ನಿರ್ದೇಶಕರು
ಅಶ್ವಿನ್ ಅಂಗಡಿ
ಶರತ್ ಗಾಯಕ್ವಾಡ್
ಡಾ ರಾಜಶೇಖರ್, ಸ್ಥಾಪಕರು ಶೇಖರ್ ಆಸ್ಪತ್ರೆಗಳು
ಡಾ|| ಅಣ್ಣಾದೊರೈ, ಇಸ್ರೋ ವಿಜ್ಞಾನಿಗಳು ಮತ್ತು ಮಂಗಳಯಾನ ಕಾರ್ಯಕ್ರಮದ ಮುಖ್ಯಸ್ಥರು
ನ್ಯಾ.ಮೂ. (ನಿವೃತ್ತ ) ಶಿವರಾಜ ಪಾಟೀಲ್, ಹೆಸರಾಂತ ಕಾನೂನು ತಜ್ಞರು
ಪದ್ಮಭೂಷಣ ಡಾ|| ದೇವಿ ಶೆಟ್ಟಿ, ಹೃದಯ ತಜ್ಞರು ಮತ್ತು ಮುಖ್ಯಸ್ಥರು ನಾರಾಯಣ ಹೃದಯಾಲಯ ಸಂಸ್ಥೆ
ಶ್ರೀನಗರ ಕಿಟ್ಟಿ , ಕನ್ನಡ ಸಿನೆಮಾ ನಟರು
ಬಿ.ಸಿ. ಪಾಟೀಲ್, ಕನ್ನಡ ಸಿನೆಮಾ ನಟರು
ಮಮತಾ ಪೂಜಾರಿ, ಭಾರತೀಯ ಮಹಿಳಾ ಕಬ್ಬಡ್ಡಿ ತಂಡದ ನಾಯಕರು
ಪೂಜ್ಯ ಶ್ರೀ ಪ್ರಕಾಶಾನಂದ ಸ್ವಾಮೀಜಿ, ರಾಮಕೃಷ್ಣಾಶ್ರಮ
ಡಾ|| ಶರಣ್ ಪಾಟೀಲ್, ಮೂಳೆ ತಜ್ಞರು ಮತ್ತು ಮುಖ್ಯಸ್ಥರು ಸ್ಪರ್ಷ ಆಸ್ಪತ್ರೆಗಳ ಸಮೂಹ
ಚಕ್ರವರ್ತಿ ಸೂಲಿಬೆಲೆ, ಸಾಮಾಜಿಕ ಕಾರ್ಯಕರ್ತರು, ಅಂಕಣಕಾರ-ಭಾಷಣಕಾರರು
ಮಿಥುನ್ ಅಭಿಮನ್ಯು, ಕ್ರಿಕೆಟ್ ಆಟಗಾರರು
ಗುರುಕಿರಣ್, ಸಂಗೀತ ನಿದರ್ೇಶಕರು
ಡಾ|| ಸಿ.ಎಸ್. ರಾವ್, ಅಧ್ಯಕ್ಷರು ರಿಲಾಯನ್ಸ ಕಮ್ಮ್ಯುನಿಕೇಶನ್
ಅಜರ್ುನ್ ದೇವಯ್ಯ, ಏಶಿಯನ್ ಗೇಮ್ಸ ಸ್ವರ್ಣ ಪದಕ ವಿಜೇತರು
ರೂಪಿಕಾ, ಕನ್ನಡ ಅಭಿನೇತ್ರಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9980000993, 8861201060, 9591810302
www.samarthabharata.org , www.vivekband.com reachout.sb@gmail.com
courtesy : samvada.org
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.