ಹೊಸದಿಲ್ಲಿ : ಆದಾಯ ತೆರಿಗೆ ವಿವರ ಸಲ್ಲಿಕೆಯ ನಮೂನೆಯನ್ನು 14 ರಿಂದ 3 ಪುಟಗಳಿಗೆ ಇಳಿಸಿ ಕೇಂದ್ರ ಹಣಕಾಸು ಸಚಿವಾಲಯ ಹೊಸ ನಮೂನೆಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಕಗ್ಗಂಟು ಮತ್ತು ಗೊಂದಲ ಭರಿತ ಐಟಿಆರ್ ನಿಂದ ಮುಕ್ತಿ ದೊರೆತಂತಾಗಿದೆ.
ಈ ಹಿಂದೆ ಇದ್ದ ಸಂಕೀರ್ಣ ಐಟಿಆರ್ ನಮೂನೆಗೆ ಉದ್ಯಮಿಗಳಿಂದ ಮತ್ತು ಸಂಸದರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಕಾರಣದಿಂದ ಕೇಂದ್ರ ಹಣಕಾಸು ಸಚಿವಾಲಯ ಮತ್ತು ಸಚಿವ ಜೇಟ್ಲಿಯವರು ಸೇರಿ ಹೊಸ ಐಟಿಆರ್ ಅನ್ನು ರೂಪಿಸಿದ್ದಾರೆ.
ವಿವಾದಕ್ಕೆ ಎಡೆ ಮಾಡಿದ್ದ ತೆರಿಗೆದಾರರ ವಿದೇಶ ಪ್ರವಾಸ ಮತ್ತು ನಿಷ್ಕ್ರಿಯ ಖಾತೆಗಳ ವಿವರ ಒದಗಿಸಬೇಕೆಂಬ ಹೊಸ ಪ್ರಸ್ತಾವವನ್ನು ಕೈ ಬಿಟ್ಟಿದೆ. ಮಾತ್ರವಲ್ಲ ಆದಾಯ ತೆರಿಗೆಯ ವಿವರ ಸಲ್ಲಿಕೆಗೆ ಜುಲೈ 31 ಇದ್ದ ಕೊನೆಯ ದಿನಾಂಕವನ್ನು ಆಗಸ್ಟ್ 31ರ ವರೆಗೆ ವಿಸ್ತರಿಸಿದೆ.
”ತೆರಿಗೆದಾರ ಪಾಸ್ಪೋರ್ಟ್ ಹೊಂದಿದ್ದರೆ ಅದರ ಸಂಖ್ಯೆ ನಮೂದಿಸುವುದನ್ನು ಕಡ್ಡಾಯ ಮಾಡಲಾಗಿದ್ದು. ಬ್ಯಾಂಕ್ ಖಾತೆಗಳಿಗೆ ಸಂಬಂಧ ಪಟ್ಟಂತೆ, ಹೊಸ ಐಟಿಆರ್ ನಮೂನೆಗಳಲ್ಲಿ ತೆರಿಗೆದಾರ ಕಳೆದ ಒಂದು ವರ್ಷದ ಸಮಯದಿಂದ ನಿರ್ವಹಿಸುತ್ತಾ ಬಂದಿರುವ ಉಳಿತಾಯ ಅಥವಾ ಚಾಲ್ತಿ ಖಾತೆಯ ಐಎಫ್ಎಸ್ ಸಂಖ್ಯೆಯನ್ನು ತುಂಬಿದರೆ ಸಾಕು ಆ ಖಾತೆಯಲ್ಲಿರುವ ಮೊಬಲಗನ್ನು ತುಂಬುವ ಅಗತ್ಯವಿಲ್ಲ ಎಂದು ತಿಳಿಸಿದೆ.
ಭಾರತೀಯ ನಾಗರಿಕನಲ್ಲದ ವ್ಯಕ್ತಿ ಭಾರತದಲ್ಲಿ ವ್ಯಾಪಾರ, ಉದ್ಯೋಗ ಅಥವಾ ವಿದ್ಯಾರ್ಥಿ ವೀಸಾದಲ್ಲಿ ನೆಲೆಸಿದ್ದರೆ, ಆತ ಅನಿವಾಸಿಯಾಗಿದ್ದಾಗ ಕಳೆದ ಒಂದು ವರ್ಷದಲ್ಲಿ ವಿದೇಶಿ ನೆಲದಲ್ಲಿ ಗಳಿಸಿದ್ದ, ಸ್ವಾಧೀನಪಡಿಸಿಕೊಂಡಿದ್ದ ಸ್ವತ್ತಿನ ವಿವರ ಒದಗಿಸುವುದು ಕಡ್ಡಾಯವಲ್ಲ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.