ತಿರುವನಂತಪುರಂ: ಕೇರಳದ ಯುವಕನೊಬ್ಬ ಗಿನ್ನಿಸ್ ರೆಕಾರ್ಡ್ ಮಾಡುವ ಸಲುವಾಗಿ 140 ತೆಂಗಿನ ಕಾಯಿಗಳನ್ನು ತನ್ನ ಕೈಯ ಮೂಲಕವೇ ಒಡೆದಿದ್ದಾನೆ. ಕಳೆದ ಫೆಬ್ರವರಿಯಲ್ಲೇ ಈ ಸಾಧನೆಯನ್ನು ಈತ ಮಾಡಿದ್ದರೂ ಬುಧವಾರವಷ್ಟೇ ಗಿನ್ನಿಸ್ ವರ್ಲ್ಡ್ ರೆಕಾರ್ಡ್ನ ಅಧಿಕೃತ ಯೂಟ್ಯೂಬ್ ಚಾನೆಲ್ನಲ್ಲಿ ಈತನ ವಿಡಿಯೋವನ್ನು ಬಿಡುಗಡೆ ಮಾಡಲಾಗಿದೆ.
ಅಭೀಷ್ ಪಿ ಡೊಮಿನಿಕ್ ಸಾಲಾಗಿ ಇಟ್ಟಿದ್ದ ತೆಂಗಿನ ಕಾಯಿಗಳನ್ನು ಒಂದೊಂದಾಗಿಯೇ ಖಾಲಿ ಕೈಯಲ್ಲಿ ಯಾವುದೇ ಸುರಕ್ಷತೆ ಅಳವಡಿಸದೆ ಒಡೆದು ಹಾಕುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ಒಂದು ಸೆಕೆಂಡುಗಳಲ್ಲಿ ಇವರು ಎರಡು ತೆಂಗಿನ ಕಾಯಿಗಳನ್ನು ಒಡೆದು ಹಾಕಿದ್ದಾರೆ, 60 ನಿಮಿಷಗಳಲ್ಲಿ 123 ತೆಂಗಿನ ಕಾಯಿ ಒಡೆದು ಹಾಕುತ್ತಿದ್ದಂತೆ ಅವರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಪುಟ ಸೇರಿದ್ದಾರೆ. ಹಿಂದಿನ ದಾಖಲೆ ಕೇವಲ 114 ಆಗಿತ್ತು. ಆ ದಾಖಲೆಯನ್ನು ಮುರಿದು ಡೊಮಿನಿಕ್ ಹೊಸ ದಾಖಲೆ ಸೃಷ್ಟಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.