ಶ್ರೀನಗರ: 18 ವರ್ಷಗಳ ಹಿಂದೆ ಉಗ್ರರು ಬೆಂಕಿ ಹಚ್ಚಿ ಆತನ ಮನೆಯನ್ನು ಸುಟ್ಟಿದ್ದರು, ಆದರೆ ಇಂದು ಆತ ಕಾಶ್ಮೀರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಇಡೀ ರಾಜ್ಯಕ್ಕೆ ಪ್ರಥಮ ಬಂದಿದ್ದಾನೆ.
ಜಮ್ಮು ಕಾಶ್ಮೀರದ ಕುಗ್ರಾಮದಲ್ಲಿ ನೆಲೆಸಿರುವ 27 ವರ್ಷದ ಅಂಜುಮ್ ಬಶೀರ್ ಖಾನ್ ನಾಗರಿಕ ಸೇವಾ ಪರೀಕ್ಷೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾನೆ. ಆತನಿಗೆ 7 ವರ್ಷವಿದ್ದಾಗ ಸುರನ್ಕೋಟೆಯ ಆತನ ಮನೆಗೆ ಉಗ್ರರು ಬೆಂಕಿ ಹಾಕಿದ್ದರು. ಬಳಿಕ ಆತನ ಇಡೀ ಕುಟುಂಬ ಜಮ್ಮುವಿನ ಗ್ರಾಮಕ್ಕೆ ಬಂದು ನೆಲೆಸಿತ್ತು.
ಇದೀಗ ಆತನ ನಾಗರಿಕ ಪರೀಕ್ಷೆಯಲ್ಲಿ ಟಾಪರ್ ಆಗಿದ್ದು, ಸುರನ್ಕೋಟೆಗೆ ವಾಪಾಸ್ ಹೋಗಿ ಅಲ್ಲಿ ನೆಲೆಸಲು ಬಯಸುತ್ತಿದ್ದಾನೆ. ಅಲ್ಲಿನ ಜನತೆಗೆ ಶಿಕ್ಷಣ ನೀಡುವ ಆಶಯ ಆತನಿಗಿದೆ. ಶಿಕ್ಷಣದಿಂದ ಮಾತ್ರ ಯುವಕರ ಅದೃಷ್ಟ ಬದಲಾಗಬಲ್ಲದು ಎಂಬುದು ಅವನ ನಂಬಿಕೆ.
ಅಧಿಕಾರಿಯಾಗುವುದಕ್ಕಿಂತ ಸಮಾಜಕ್ಕೆ ಸೇವೆ ಸಲ್ಲಿಸುವುದು ಅತೀ ಮುಖ್ಯ ಎಂದು ಅಂಜುಮ್ ಹೇಳುತ್ತಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.