ಜಮ್ಮು: 53 ಬಾರಿ ರಕ್ತದಾನ ಮಾಡಿದ ಜಮ್ಮುವಿನ ಮಹಿಳಾ ವೈದ್ಯರೊಬ್ಬರಿಗೆ ಐಎಸ್ಬಿಟಿ ಸಂಸ್ಥೆ ಪ್ರಶಸ್ತಿ ನೀಡಿ ಗೌರವಿಸಿದೆ.
ಜಮ್ಮುವಿನ ಪೊಲೀಸ್ ಹಾಸ್ಪಿಟಲ್ನ ಹಿರಿಯ ವೈದ್ಯಕೀಯ ಅಧಿಕಾರಿಯಾಗಿರುವ ಕಿರಣ್ ಶರ್ಮಾ ಅವರು ಇದುವರೆಗೆ 53 ಬಾರಿ ರಕ್ತದಾನವನ್ನು ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ‘ಇಂಡಿಯನ್ ಸೊಸೈಟಿ ಆಫ ಬ್ಲಡ್ ಟ್ರಾನ್ಸ್ಫ್ಯೂಶನ್ ಆಂಡ್ ಇಮ್ಯೂನೊಹೆಮಟಾಲಜಿ(ಐಎಸ್ಬಿಟಿಐ) ಸಂಸ್ಥೆ ಪ್ರಶಸ್ತಿ ನೀಡಿದೆ.
1972ರಲ್ಲಿ ಭಾರತ-ಪಾಕಿಸ್ಥಾನ ಯುದ್ಧದ ಬಳಿಕ ದೇಶದಲ್ಲಿ ರಕ್ತದಾನ ಮಾಡುವಂತೆ ಜನರನ್ನು ಪ್ರೇರೇಪಿಸಲು ಐಎಸ್ಬಿಟಿಯು ಸ್ಥಾಪನೆಗೊಂಡಿದೆ.
ಇದುವರೆಗೆ ಈ ಸಂಸ್ಥೆ 10 ಮಹಿಳೆಯರಿಗೆ ಪ್ರಶಸ್ತಿಯನ್ನು ನೀಡಿದ್ದು, ಅದರಲ್ಲಿ ಶರ್ಮಾ ಕೂಡ ಒಬ್ಬರು. ಇವರು 1987ರಿಂದ ವಿದ್ಯಾರ್ಥಿ ಜೀವನದಿಂದಲೇ ರಕ್ತದಾನ ಮಾಡುತ್ತಾ ಬರುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.