News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಶಾರದಾ ವಿದ್ಯಾಲಯದಲ್ಲಿ ಅಕ್ಷರಾಭ್ಯಾಸ ಕಾರ್ಯಕ್ರಮ

ಮಂಗಳೂರು : ನಗರದ ಕೊಡಿಯಾಲ್‌ಬೈಲಿನ ಶಾರದಾ ವಿದ್ಯಾಲಯದಲ್ಲಿಂದು ಎಲ್.ಕೆ.ಜಿ. ತರಗತಿಗಳಿಗೆ ಪ್ರವೇಶ ಪಡೆದ ಪುಟಾಣಿ ವಿದ್ಯಾರ್ಥಿಗಳಿಗಾಗಿ ಅತ್ಯಂತ ಸಂಭ್ರಮದಿಂದ ಅಕ್ಷರಭ್ಯಾಸವನ್ನು ಮಾಡಿಸಲಾಯಿತು. ಬಾಲ್ಯದಲ್ಲಿ ಉತ್ತಮವಾದ ಪರಿಸರದಲ್ಲಿ ಅತ್ಯುತ್ತಮ ಸಂಸ್ಕಾರ ಭರಿತ ಶಿಕ್ಷಣ ದೊರಕಿದಲ್ಲಿ ಮಕ್ಕಳಲ್ಲಿ ಉತ್ತಮ ಗುಣ-ನಡತೆ ಕಂಡುಬರುವುದಲ್ಲದೆ, ಈ ಸಂಸ್ಕಾರ ಅವರ ಜೀವಾನಾಂತ್ಯದವರೆಗೂ ಸ್ಥಿರವಾಗಿರುತ್ತದೆ ಎಂಬುದಾಗಿ ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಮಾನ್ಯ ಪ್ರೊ.ಎಂ.ಬಿ.ಪುರಾಣಿಕರು ಅಕ್ಷರಾಭ್ಯಾಸ ಕಾರ್ಯಕ್ರಮದ ಉದ್ದೇಶ ಹಾಗೂ ಮಹತ್ವವನ್ನು ವಿವರಿಸಿದರು.

Akshara-Abhyasa-photo

ಶಾರದಾವಿದ್ಯಾಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾರ ಡಾ| ಲೀಲಾ ಉಪಾಧ್ಯಾಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾರದಾ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಶ್ರೀ ರಮೇಶ್ ಆಚಾರ್ಯರು ಹಾಗೂ ವಿದ್ಯಾಲಯದ ಸಂಸ್ಕೃತ ಅಧ್ಯಾಪಕರಾದ ಶ್ರೀ ಶ್ರೀಪತಿ ಭಟ್ ಅವರು ಅಕ್ಷರಾಭ್ಯಾಸ ಮಾರ್ಗದರ್ಶನವಿತ್ತರು.

ವಿದ್ಯಾಲಯದ ಸಂಗೀತ ಶಿಕ್ಷಕಿ ಶ್ರೀಮತಿ ರಜನಿ ಶೆಣೈ ಪ್ರಾರ್ಥನೆಗೈದರೆ, ವಿದ್ಯಾಲಯದ ಪ್ರಾಂಶುಪಾಲೆ ಶ್ರೀಮತಿ ಸುನೀತಾ ವಿ. ಮಡಿ

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top