ನಿನ್ನೆ ಜನರು ಕಾಂಗ್ರೆಸ್ ಬಾವುಟ ಹಿಡಿದು ಕುಪ್ಪಳಿಸಿದ್ದನ್ನು ನೋಡಿದೆ. ರಾಹುಲ್ ಗಾಂಧಿ ಅಧ್ಯಕ್ಷರಾದ ಖುಷಿಗೆ ಕುಣಿಯುತ್ತಿದ್ದರು!. ಅರೆ ಕ್ಷಣ ಇವರೆಲ್ಲ ನೈಜ ಗಾಂಧಿವಾದಿಗಳಂತೆ ಕಂಡರು. ಮಹಾತ್ಮ ಕಂಡ ಕಾಂಗ್ರೆಸ್ನ್ನು ವಿಸರ್ಜಿಸುವ ಕನಸು ರಾಹುಲ್ ಅಲ್ಲದೆ ಬೇರಾರು ನಿಜ ಮಾಡಿಯಾರು?
ಬೇರಾವುದೇ, ಪಕ್ಷದಲ್ಲಾಗಿದ್ದರೆ 22 ಚುನಾವಣೆಗಳನ್ನು ಸತತವಾಗಿ ಸೋತವರನ್ನು ಪಕ್ಷದ ಕಚೇರಿಯ ಗುಮಾಸ್ತನಾಗಿಯೂ ಇಟ್ಟುಕೊಳ್ಳುತ್ತಿರಲಿಲ್ಲ. ಆದರೆ ಕಾಂಗ್ರೆಸ್ನಲ್ಲಿ ಆತ ರಾಷ್ಟ್ರೀಯ ಅಧ್ಯಕ್ಷನಾಗುತ್ತಾನೆ!
ಗೆಲ್ಲುವುದನ್ನೇ ಹವ್ಯಾಸ ಮಾಡಿಕೊಂಡಿರೋ ಮೋದಿ- ಷಾ ಜೋಡಿ ಮುನಿಸಿಪಾಲಿಟಿಯಷ್ಟಿರುವ ದೆಹಲಿ ಚುನಾವಣೆ ಸೋತಾಗ “ಮಾರ್ಗದರ್ಶಕ”ರೆಲ್ಲ ಕೆಂಡಾಮಂಡಲರಾಗಿದ್ದರು, ಬಿಹಾರ್ ಸೋತಾಗ ಬೀದಿ ರಂಪ ಮಾಡಿದ್ದರು, ನೆಲೆಯೇ ಇಲ್ಲದ ತಮಿಳನಾಡು ಸೋತಾಗ ಅಮಿತ್ ಷಾ ರಾಜೀನಾಮೆ ಬಯಿಸಿದ್ದರು ಪಕ್ಷದ MP ಶತ್ರುಘ್ನ ಸಿನ್ಹ! . ಗುಜರಾತ್ನಲ್ಲಿ ಕಳೆದ ಬಾರಿಗಿಂತ ನೂರು ವೋಟ್ ಕಡಿಮೆ ಬಂದರೂ ಮೋದಿ ಫೇಲ್ ಅಂತ ಅವರದೇ ಪಕ್ಷದಲ್ಲಿ ಇರುವ ವಿರೋಧಿ ಬಣ ಡಂಗೂರ ಸಾರಿಸುತ್ತಾರೆ. ಆದರೆ ಕಾಂಗ್ರೆಸ್ ಇಷ್ಟ ಅಗೋದೇ ಇಲ್ಲಿ. ಗೆದ್ದಾಗೆಲ್ಲ ರಾಹುಲ್ ಗಾಂಧಿ ಚರಿಷ್ಮಾ, ಸೋತಾಗ ತಲೆ ಕೊಡಲು ಒಬ್ಬ ‘ಮೌನಿ ಸಿಂಗ್’ ತಯಾರಿರುತ್ತಾನೆ!
ಚೈನೀಸ್ ಪತ್ರಿಕೆ ‘Peoples Daily’ ಭಾರತದ ಪ್ರಜಾತಂತ್ರವನ್ನು ಯಾವಾಗಲೂ ಹೀಗಳೆಯುತ್ತದೆ. ನೋಡಿ, ನಮ್ಮ ದೇಶದಲ್ಲೇನಾದರೂ ಪ್ರಜಾಪ್ರಭುತ್ವ ಬಂದರೆ ಭಾರತದಂತೆ ಆಗುತ್ತೀವಿ ಅನ್ನುತ್ತೆ. ಭಾರತದ ವ್ಯವಸ್ಥೆಯನ್ನು ಅವಹೇಳನ ಮಾಡಿ ತನ್ನ ಕಮ್ಯುನಿಸ್ಟ್ ಸರ್ವಾಧಿಕಾರವನ್ನು ಸಮರ್ಥಿಸುತ್ತದೆ.
ದೇಶವನ್ನು ಅತ್ಯಂತ ಹೆಚ್ಚು ಕಾಲ ಆಳಿದ ಒಂದು ಪಕ್ಷದ ಪದ್ಧತಿ ನೋಡಿ. ಒಂದು ಕುಟುಂಬ ತನ್ನ ಸುತ್ತಲು ಒಂದು ಗುಲಾಮರ ಕೋಟೆ ಕಟ್ಟಿಕೊಂಡು, ನಿರಂತರವಾಗಿ ಅಧಿಕಾರವನ್ನು ತನ್ನ ಕೈಲಿ ಕಾಯ್ದುಕೊಂಡರೆ ಅದು ಯಾವ ಪ್ರಜಾಪ್ರಭುತ್ವ? ದೇಶವನ್ನು ಆಳುವ ಉನ್ನತ ಮಟ್ಟದಲ್ಲೇ ಗುಲಾಮಿ ಮನೋಭಾವದವರು ತುಂಬಿಕೊಂಡಿರುವಾಗ ಯಾವ ಪಾಕಿಸ್ಥಾನ ನಮಗೆ ಅಂಜುತ್ತದೆ? ಯಾವ ಚೀನಾ ಹೀಯಾಳಿಸದೆ ಇರದು?
ಇದನ್ನು ಕೇಳಿದರೆ Oxford, Cambridge ನಲ್ಲಿ ಓದಿ ಬಂದ ನಮ್ಮ ಕಾಂಗ್ರೆಸ್ ನಾಯಕರು ಔರಂಗಜೇಬನ ಕಾಲದಲ್ಲಿ ಸಹ ಹೀಗೆಯೇ ಅಧಿಕಾರ ವರ್ಗಾವಣೆ ಆಗುತ್ತಿತ್ತು, ಆಗ ನೀವೆಲ್ಲ ಕೇಳಿದಿರಾ ಅನ್ನುತ್ತಾರೆ!
ಈ ಮಾತನ್ನು ತಪ್ಪು ಎಂದು ಒಬ್ಬ ಬಡವ ಎದುರು ನಿಂತರೆ, ಅವನನ್ನು ಬಾ ಕಾಂಗ್ರೆಸ್ ಆಫೀಸ್ನ ಮುಂದೆ ಟೀ ಮಾರು, ದೇಶ ಅಳೋಕೆ ಗಾಂಧಿ ಕುಟುಂಬದವರಲ್ಲದೆ ಬೇರಾರು ಶಕ್ತರಲ್ಲ ಅನ್ನೋ ತರ ಹೀಯಾಳಿಸುತ್ತಾರೆ! ಹಾ.. ಸರಿ ಎಂದು ಕಾಂಗ್ರೆಸ್ ಆಫೀಸ್ ಮುಂದೆ ಟೀ ಅಂಗಡಿ ಹಾಕೋಣ ಎಂದರೂ ಇವತ್ತು ಅಲ್ಲಿ ಒಂದು ನೊಣ ಸಹ ತಿರುಗಾಡಲ್ಲ!
ಕಾಂಗ್ರೆಸ್ನ ಪ್ರಭಾವ ನೋಡಿ. ನಮ್ಮ ದೇಶದಲ್ಲಿ ಹುಟ್ಟಿಕೊಂಡ ಎಲ್ಲ ಪಕ್ಷಗಳು ವಂಶವಾದವನ್ನೇ ಬೆಳೆಸಿಕೊಂಡು ಬಂದಿದೆ. ಉತ್ತರದ ಮುಫ್ತಿ, ದಕ್ಷಿಣದ ನಿಧಿ, UP ಯ ಮಾಯ, ಕರ್ನಾಟಕದ ಗೌಡ್ರು ಎಲ್ಲರು ತಮ್ಮ ಮಕ್ಕಳೇ ಇರಲಿ ಎಂದು ಮುಂದೆ ಮಾಡಿದವರೆ. ಒಂದು ಸಮೀಕ್ಷೆ ಪ್ರಕಾರ ಶೇಕಡಾ 28 ರಷ್ಟು ಸಂಸದರು ವಂಶ ರಾಜಕೀಯದ ಕುಡಿಗಳು! ನಮ್ಮ ದೇಶದಲ್ಲಿ ಬಿಜೆಪಿ ಹಾಗೂ ಕಮ್ಯುನಿಸ್ಟ್ರನ್ನು ಬಿಟ್ಟರೆ ಫ್ಯಾಮಿಲಿ ಬ್ಯುಸಿನೆಸ್ ಆಗದ ಪಕ್ಷ ಇನ್ನೊಂದು ಇಲ್ಲ.
ಹಾಗಾಗಿ ಕಾಂಗ್ರೆಸ್ನ ಮುಂದೆ ಗಾಂಧಿ ವಂಶದವರಲ್ಲದೆ ಬೇರೆ option ಸಹಾ ಇಲ್ಲ. ಅಪ್ಪಿ ತಪ್ಪಿ ಬೇರೆ ಯಾರನ್ನಾದರೂ ಮಾಡಿದರೆ ಅವರು ಆಟಕ್ಕುಂಟು ಲೆಕ್ಕಕಿಲ್ಲ!
ರಾಹುಲ್ ಗಾಂಧಿ ಮನೆಯ ‘ಪಿಡಿ’ ಗೂ ಸಲಾಮು ಮಾಡಿಕೊಂಡು ಬಂದವರನ್ನು ಯಾವ ಕುರ್ಚಿ ಮೇಲೆ ಕೂರಿಸಿದರೂ ಬಾಲ ಡೊಂಕೇ! . So, ಎಷ್ಟೇ ‘ಪಪ್ಪು’ ಆದರು ಗಾಂಧಿ ಕುಡಿಯೇ ಕಾಂಗ್ರೆಸ್ಗೆ ಆಸ್ತಿ. 70 ವರ್ಷಗಳ ಅಧಿಕಾರದ ಮದದಲ್ಲಿ ಕಾರ್ಯಕರ್ತರ ಬೆಳೆಸುವುದನ್ನು ಮರೆತ ಪಕ್ಷ ಒಬ್ಬ ಮೂರ್ಖ ದೊರೆಯ ಕಾಲದಲ್ಲಿಯೂ ಅಂತ್ಯವಾಗದಿದ್ದರೆ ನಮ್ಮ ಪ್ರಜಾಪ್ರಭುತ್ವದಲ್ಲಿ ಏನೋ ಗಂಭೀರ ಕೊರತೆ ಇದ್ದಂತೆ. ಹಾಗಾಗದಿರಲಿ.
ಪ್ರಜಾಪ್ರಭುತ್ವo ಗೆಲ್ಗೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.