ಅಮರಾವತಿ: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ತಮ್ಮ ರಾಜ್ಯದ ರಾಜಧಾನಿ ಅಮರಾವತಿಯನ್ನು ಅತ್ಯಂತ ವೈಭವೋಪೇತ ರೀತಿಯಲ್ಲಿ ನಿರ್ಮಿಸಲು ಹೊರಟಿದ್ದಾರೆ. ಅದಕ್ಕಾಗಿ ಹಲವಾರು ಯೋಜನೆಗಳನ್ನು ಅವರು ಹಾಕಿಕೊಂಡಿದ್ದಾರೆ.
ಅಮರಾವತಿಯ ಕಟ್ಟಡಗಳು, ಮೂಲಸೌಕರ್ಯಗಳು ಹೇಗಿರಬೇಕು ಎಂಬ ಯೋಜನೆ ರೂಪಿಸುವ ಜವಾಬ್ದಾರಿಯನ್ನು ಬಾಹುಬಲಿ ಎಂಬ ಮಹಾನ್ ಕಲ್ಪನಾಮಯ ಸಿನಿಮಾವನ್ನು ನಿರ್ದೇಶಿಸಿದ ಎಸ್.ಎಸ್ ರಾಜಮೌಳಿ ಅವರಿಗೆ ನೀಡಿದ್ದಾರೆ.
ಈಗಾಗಲೇ ರಾಜಮೌಳಿ ಅವರು ಚಂದ್ರಬಾಬು ನಾಯ್ಡು ಅವರಿಗೆ ತಮ್ಮ ಯೋಜನೆಗಳನ್ನು ಪ್ರಸ್ತುತಪಡಿಸಿದ್ದಾರೆ. ಮೂಲಗಳ ಪ್ರಕಾರ ಹೆಚ್ಚಿನ ಯೋಜನೆಗಳಿಗೆ ನಾಯ್ಡು ಇನ್ನೂ ಓಕೆ ಅಂದಿಲ್ಲ. ಅಂತಿಮ ಮಟ್ಟದಲ್ಲಿ ಇನ್ನಷ್ಟೇ ಯೋಜನೆ ರೂಪುಗೊಳ್ಳಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.