ನ್ಯೂಯಾರ್ಕ್: ಈ ವರ್ಷದ ಆರಂಭದಲ್ಲಿ ಕನ್ಸಾಸ್ನಲ್ಲಿ ನಡೆದ ಜನಾಂಗೀಯ ದ್ವೇಷದ ದಾಳಿಯಲ್ಲಿ ಭಾರತೀಯನನ್ನು ರಕ್ಷಿಸಿ ತನ್ನ ಪ್ರಾಣವನ್ನು ಒತ್ತೆ ಇಟ್ಟ ಅಮೆರಿಕ ಪ್ರಜೆ ಇಯಾನ್ ಗ್ರಿಲ್ಲೊಟ್ ಅವರಿಗೆ ಟೈಮ್ಸ್ ಮ್ಯಾಗಜೀನ್ನ ಗೌರವ ದೊರೆತಿದೆ.
ಟೈಮ್ನ ‘2017ರಲ್ಲಿ ನಮಗೆ ಭರವಸೆ ನೀಡಿದ 5 ಹೀರೋಗಳು’ನಲ್ಲಿ ಗ್ರಿಲ್ಲೋಟ್ ಅವರೂ ಇದ್ದಾರೆ.
ಕನ್ಸಾಸ್ ಬಾರ್ವೊಂದರಲ್ಲಿ ಭಾರತೀಯರನ್ನು ಗುರಿಯಾಗಿಸಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ ವೇಳೆ 24 ವರ್ಷದ ಗ್ರಿಲ್ಲೋಟ್ ಮಧ್ಯಪ್ರವೇಶ ಮಾಡಿ ಭಾರತೀಯನನ್ನು ಕಾಪಾಡಿದ್ದರು. ಘಟನೆಯಲ್ಲಿ ಗಾಯಗೊಂಡಿದ್ದರು.
ಘಟನೆಯಲ್ಲಿ 32 ವರ್ಷದ ಶ್ರೀನಿವಾಸ್ ಕುಚಿಬೋಟ್ಲಾ ಮೃತರಾಗಿ, ಅವರ ಸಹೋದ್ಯೋಗಿ ಅಲೋಕ್ ಮದಸನಿ ಗಾಯಗೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.