ವಿದೇಶಕ್ಕೆ ಹಾರಿ ಹೋಗಿ ಜೀವನ ಕಟ್ಟಿಕೊಂಡ ಬಳಿಕ ಸ್ವದೇಶ ಮತ್ತು ಸ್ವದೇಶದ ಜನರ ಬಗ್ಗೆ ಚಿಂತನೆ ಮಾಡುವವರೇ ವಿರಳ. ಆದರೆ ಈ ಮಾತಿಗೆ ವಿರುದ್ಧ ಎಂಬಂತೆ ಕಾರ್ಯ ನಿರ್ವಹಣೆ ಮಾಡುತ್ತಾ ಬರುತ್ತಿದೆ ಸಿಖ್ ಹ್ಯುಮನ್ ಡೆವಲಪ್ಮೆಂಟ್ ಫೌಂಡೇಶನ್.
ವಾಷಿಂಗ್ಟನ್ನಲ್ಲಿನ ಈ ಫೌಂಡೇಶನ್ ಪಂಜಾಬ್ನ ಬಡ ಮಕ್ಕಳಿಗೆ ಶಿಕ್ಷಣ ನೀಡುವ ಸಲುವಾಗಿ ಇದುವರೆಗೆ ರೂ.12 ಕೋಟಿಗಳನ್ನು ಖರ್ಚು ಮಾಡಿದೆ. ಅಮೆರಿಕಾದ್ಯಂತ ನೆಲೆಸಿರುವ ಪಂಜಾಬ್ ಸಿಖ್ಖರಿಂದ ಸಂಗ್ರಹ ಮಾಡಿದ ಹಣ ಇದಾಗಿದೆ.
ಬಡ ಮತ್ತು ಬುದ್ಧಿವಂತ ಮಕ್ಕಳಿಗೆ ಪ್ರತಿವರ್ಷ ಸ್ಕಾಲರ್ಶಿಪ್ಗಳನ್ನು ನೀಡುತ್ತದೆ. ಪಂಜಾಬ್ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿದರೂ ಅಕ್ಕ ಪಕ್ಕದ ರಾಜ್ಯಗಳ ಮಕ್ಕಳಿಗೂ ಇದು ಸ್ಕಾಲರ್ಶಿಪ್ಗಳನ್ನು ನೀಡುತ್ತ ಬಂದಿದೆ. ಇದುವರೆಗೆ ಅದು 5 ಸಾವಿರ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಿದೆ.
ಸ್ಕಾಲರ್ಶಿಪ್ ಪಡೆದು ಓದಿ ದೊಡ್ಡ ಉದ್ಯೋಗಕ್ಕೆ ಸೇರಿದವರು ಕೂಡ ಈ ಫೌಂಡೇಶನ್ಗೆ ಅನುದಾನ ನಿಡುವ ಮೂಲಕ ಋಣ ಸಂದಾಯ ಮಾಡುವುದು ಮಾತ್ರವಲ್ಲ, ಮತ್ತೊಬ್ಬ ಮಕ್ಕಳ ಬದುಕಲ್ಲಿ ಆಶಾಕಿರಣವಾಗುತ್ತಿದ್ದಾರೆ.
ನಿಜಕ್ಕೂ ಪರವೂರಿಗೆ ಹೋದರು ತನ್ನ ತನವನ್ನು ಬಿಡದ ಪಂಜಾಬಿಗಳಿಂದ ಇತರರೂ ಕಲಿಯಬೇಕಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.