ವಡೋದರ: 26/11ರ ಮುಂಬಯಿ ದಾಳಿಯ ಬಳಿಕ ಸೇನೆ ಸನ್ನದ್ಧವಾಗಿದ್ದರೂ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಪಾಕಿಸ್ಥಾನದ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ನಡೆಸುವ ಧೈರ್ಯವನ್ನು ಯಾಕೆ ತೋರಿಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ.
ವಡೋದರದಲ್ಲಿ ಭಾನುವಾರ ಸಂಜೆ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ‘ದಾಳಿಯ ಬಳಿಕ ಸೇನೆಯು ಸಿಂಗ್ ಅವರನ್ನು ಭೇಟಿಯಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸುವ ಇಂಗಿತ ವ್ಯಕ್ತಪಡಿಸಿತ್ತು, ಆದರೆ ಸರ್ಕಾರ ಅದಕ್ಕೆ ಧೈರ್ಯ ತೋರಿಸಲಿಲ್ಲ’ ಎಂದಿದ್ದಾರೆ.
ಉತ್ತರಪ್ರದೇಶದಲ್ಲಿ ಕಮಲವನ್ನು ಅರಳಿಸಲು ಮತ್ತು ಅಲ್ಲೂ ಗುಜರಾತ್ ಮಾದರಿಯ ಆಡಳಿತವನ್ನು ತರಲು 2014ರಲ್ಲಿ ವಡೋದರ ಲೋಕಸಭಾ ಸ್ಥಾನವನ್ನು ತೊರೆದೆ ಎಂದು ಮೋದಿ ಈ ವೇಳೆ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.