ಲುನವಡ: ತನ್ನ ಕುಟುಂಬದ ಹಿನ್ನಲೆಯನ್ನು ಪ್ರಶ್ನಿಸಿದ ಯುವ ಕಾಂಗ್ರೆಸ್ ಮುಖಂಡ ಸಲ್ಮಾನ್ ನಿಝಾಮಿಗೆ ತಕ್ಕ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತವೇ ನನ್ನ ಸರ್ವಸ್ವ ಎಂದಿದ್ದಾರೆ.
ಗುಜರಾತಿನ ಲುನವಡದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ’ನನ್ನನ್ನು ಅವಹೇಳನ ಮಾಡುತ್ತಿರುವ, ನನ್ನ ಬಡ ಕುಟುಂಬವನ್ನು ಅಪಹಾಸ್ಯ ಮಾಡುತ್ತಿರುವ, ನನ್ನ ಹೆತ್ತವರು ಯಾರೆಂದು ಪ್ರಶ್ನಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ ನಾನು, ಭಾರತವೇ ನನ್ನ ಸರ್ವಸ್ವ ಎಂಬ ಉತ್ತರ ನೀಡಲು ಬಯಸುತ್ತೇನೆ. ನನ್ನ ಬದುಕಿನ ಪ್ರತಿಕ್ಷಣವೂ ರಾಷ್ಟ್ರಕ್ಕೆ ಸಮರ್ಪಣೆ ಎಂದು ಹೇಳ ಬಯಸುತ್ತೇನೆ’ ಎಂದರು.
ಯುವ ಕಾಂಗ್ರೆಸ್ ಮುಖಂಡ ಸಲ್ಮಾನ್ ನಿಝಾಮಿ ಎಂಬಾತ ಟ್ವಿಟರ್ನಲ್ಲಿ, ರಾಹುಲ್ ದೇಶಕ್ಕೇ ದೇಹ ತ್ಯಾಗ ಮಾಡಿದ ರಾಜೀವ್ ಗಾಂಧೀ ಪುತ್ರ ಮತ್ತು ಇಂದಿರಾ ಗಾಂಧಿಯವರ ಮೊಮ್ಮಗ, ಆದರೆ ಮೋದಿ ಯಾರು , ಅವರ ಹಿನ್ನಲೆ ಏನು ಎಂದು ಪ್ರಶ್ನಿಸಿದ್ದ.
ಇದಕ್ಕೆ ಉತ್ತರವಾಗಿ ಮೋದಿ, ದೇಶವೇ ನನ್ನ ಸರ್ವಸ್ವ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.