ನವದೆಹಲಿ: ‘ಕುಂಭಮೇಳ’ವನ್ನು ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರತಿನಿಧಿ ಪಟ್ಟಿಯಲ್ಲಿ ಯುನೆಸ್ಕೋ ಸೇರ್ಪಡೆಗೊಳಿಸಿದೆ.
ದಕ್ಷಿಣ ಕೊರಿಯಾದ ಜೆಜುವಿನಲ್ಲಿ ನಡೆದ 12ನೇ ಸೆಷನ್ಸ್ನಲ್ಲಿ ಅಮೂರ್ತ ಸಾಂಸ್ಕೃತಿ ಪರಂಪರೆಗಳನ್ನು ಸಂರಕ್ಷಿಸುವ ಇಂಟರ್ಗವರ್ನ್ಮೆಂಟಲ್ ಸಮಿತಿಯು ಕುಂಭಮೇಳವನ್ನು ಈ ಪಟ್ಟಿಗೆ ಸೇರಿಸಿದೆ.
2016ರಲ್ಲಿ ಯೋಗ ಮತ್ತು ನೌರೋಝ್ ಈ ಪಟ್ಟಿಗೆ ಸೇರಿತ್ತು. ಇದೀಗ ಕುಂಭ ಮೇಳ ಈ ಗೌರವಕ್ಕೆ ಪಾತ್ರವಾಗಿದೆ.
ಕುಂಭಮೇಳವನ್ನು ಭೂಮಿ ಮೇಲಿನ ಶಾಂತಿಯುತವಾದ ಯಾತ್ರಾರ್ಥಿಗಳ ಅತೀದೊಡ್ಡ ಸಂಗಮ ಎಂದು ಸಮಿತಿ ಬಣ್ಣಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.