ಅಯೋಧ್ಯಾ: ವಿವಾದದ ಕೇಂದ್ರ ಬಿಂದು ಎಂದೇ ಬಿಂಬಿತವಾಗಿರುವ ಅಯೋಧ್ಯಾದಲ್ಲೂ ಹಿಂದೂ-ಮುಸ್ಲಿಮರ ನಡುವೆ ಸಾಮರಸ್ಯವಿದೆ. ಅಲ್ಲಿನ ತಾತ್ಕಾಲಿಕ ರಾಮ ಮಂದಿರವನ್ನು ಸರಿಪಡಿಸುವುದರಿಂದ ಹಿಡಿದು ರಾಮನಿಗೆ ವಸ್ತ್ರ ತಯಾರಿಸುವ ಕಾಯಕವನ್ನೂ ಇಲ್ಲಿನ ಮುಸ್ಲಿಮರು ಮಾಡುತ್ತಾರೆ.
ಮಳೆ, ಸಿಡಿಲಿನಿಂದಾಗಿ ರಾಮ ದೇಗುಲ ಹಾನಿಗೊಳಗಾದರೆ ಅದರ ರಿಪೇರಿ ಕಾರ್ಯವನ್ನು ಮಾಡಲು ಪಿಡಬ್ಲ್ಯೂ ಕರೆಯುದೇ 38 ವರ್ಷದ ವೆಲ್ಡರ್ ಅಬ್ದುಲ್ ವಹೀದ್ ಅವರನ್ನು. ದೇಗುಲದ ಗ್ಯಾಸ್, ರೋಡ್ ಎಲ್ಲದರ ಸುರಕ್ಷತೆಯನ್ನೂ ಇವರೇ ನೋಡಿಕೊಳ್ಳುತ್ತಿದ್ದಾರೆ. ದಿನಕ್ಕೆ ರೂ.250 ಮಾತ್ರ ಇವರ ಪಗಾರ. ದೇಗುಲದ ಕಾರ್ಯ ನನಗೆ ಸಂತೋಷ ಕೊಡುತ್ತದೆ ಎಂಬುದು ಅವರ ಅಂಬೋಣ.
ಕುರ್ತಾ, ಜಾಕೆಟ್ಗಳನ್ನು ಹೊಲಿಯುವ ಸಾದಿಕ್ ಅಲಿ ‘ರಾಮ ಲಲ್ಲಾ’ನಿಗೂ ವಸ್ತ್ರಗಳನ್ನು ಸ್ಟಿಚ್ ಮಾಡುತ್ತಾರೆ. ದೇಗುಲದ ಅರ್ಚಕರ ಸೂಚನೆಯ ಮೇರೆಗೆ ಪ್ರತಿ ತಿಂಗಳೂ ಇವರು ರಾಮನಿಗೆ ವಸ್ತ್ರ ಹೊಲಿದು ಕೊಡುತ್ತಾರೆ.
ಇಲ್ಲಿನ ಸಮುದಾಯ ಅಡುಗೆ ಮನೆ ಸೀತಾ ಕುಂಡಕ್ಕೆ 1995ರಲ್ಲಿ ಮೊದಲ ಬಾರಿಗೆ ಮೂರು ಹಂತದ ಅಂಡರ್ ಗ್ರೌಂಡ್ ವಾಟರ್ ಅಗೆಯುವ ಮೋಟಾರನ್ನು ಅಳವಡಿಸಿದ್ದು ಮೆಹಬೂಬ್ ಎಂಬ ಮುಸ್ಲಿಮ್.
ಒಟ್ಟಿನಲ್ಲಿ ಅಯೋಧ್ಯಾದ ರಾಮನಿಗೂ, ಅಲ್ಲಿನ ಮುಸ್ಲಿಮರಿಗೂ ಯಾವುದೇ ರೀತಿಯ ವೈಷಮ್ಯಗಳಿಲ್ಲ. ಅವರು ಅಲ್ಲಿ ಸೌಹಾರ್ದವಾಗಿಯೇ ಇದ್ದಾರೆ ಎಂಬುದಕ್ಕೆ ಇದು ನಿದರ್ಶನ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.