ನವದೆಹಲಿ: ಅಂಗಾಂದ ದಾನ ಮಹತ್ವವನ್ನು ತಿಳಿದಿರುವವರು ಅತಿ ವಿರಳ. ಸಾವಿನಲ್ಲೂ ಇನ್ನೊಬ್ಬರ ಬದುಕನ್ನು ಬೆಳಗಿಸುವ ಅವಕಾಶ ನಮಗಿದೆ ಎಂದರೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕಾದುದು ನಮ್ಮ ಕರ್ತವ್ಯ. ಆ ನಿಟ್ಟಿನಲ್ಲಿ ಭಾರತದ ರಾಜಕಾರಣಿಯೊಬ್ಬರು ಉತ್ತಮ ಉದಾಹರಣೆ ಕೊಟ್ಟಿದ್ದರು.
ಬಿಹಾರ ಬಿಜೆಪಿ ಮುಖ್ಯಸ್ಥ, ಸಚಿವ ಸುಶೀಲ್ ಕುಮಾರ್ ಮೋದಿಯವರು ತಮ್ಮ ಪುತ್ರನ ವಿವಾಹ ಸಮಾರಂಭದಲ್ಲಿ ಅಂಗಾಂಗ ದಾನ ಮಾಡಲು ಹೆಸರು ನಮೋದಿಸುವ ಸ್ಟಾಲ್ವೊಂದನ್ನು ತೆರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
೨೦೧೬ರಿಂದ ಸುಶೀಲ್ ಮೋದಿಯವರು ‘ಅಂಗಾಂಗ ದಾನ’ ಅಭಿಯಾನದಲ್ಲಿ ಸಕ್ರಿಯರಾಗಿದ್ದಾರೆ. ಇದೀಗ ಪುತ್ರನ ಮದುವೆಯಲ್ಲೂ ಈ ಅಭಿಯಾನವನ್ನು ಅವರು ಮುಂದುವರೆಸಿದ್ದಾರೆ.
’ದಾಧಿಚಿ ದೇಹ್ ದಾನ್ ಸಮಿತಿ’ಯವರು ಮೋದಿಯವರ ಪುತ್ರ ಉತ್ಕರ್ಷ್ ಮೋದಿಯವರ ವಿವಾಹದಲ್ಲಿ ಅಂಗಾಂಗ ದಾನದ ಸ್ಟಾಲ್ ಹಾಕಿದ್ದರು. ಇಲ್ಲಿ ಅತಿಥಿಗಳು ಅಂಗಾಂಗ ದಾನಕ್ಕೆ ಹೆಸರು ನಮೋದನೆ ಮಾಡಿಕೊಂಡರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.