ಮುಂಬೈ: ಭರವಸೆಯ ಮುಂಬೈ ಕ್ರಿಕೆಟ್ ಆಟಗಾರ ಪೃಥ್ವಿ ಶಾ ಅವರು ಅಂಡರ್ 19 ಐಸಿಸಿ ಕ್ರಿಕೆಟ್ ವಿಶ್ವಕಪ್ನಲ್ಲಿ 16 ಸದಸ್ಯರುಳ್ಳ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಆಲ್ ಇಂಡಿಯಾ ಜೂನಿಯರ್ ಸೆಲೆಕ್ಷನ್ ಕಮಿಟಿ ಐಸಿಸಿ ಯು-19 ಕ್ರಿಕೆಟ್ ವರ್ಲ್ಡ್ಕಪ್ 2018ಗೆ ಭಾರತ ತಂಡವನ್ನು ಆಯ್ಕೆ ಮಾಡಿದೆ. ಜನವರಿ 13ರಿಂದ ಫೆಬ್ರವರಿ 3ರವರೆಗೆ ವಿಶ್ವಕಪ್ ನಡೆಯಲಿದೆ.
2000, 2008 ಮತ್ತು 2012ರಲ್ಲಿ ಭಾರತ ಯು-19 ವರ್ಲ್ಡ್ಕಪ್ ಗೆದ್ದುಕೊಂಡಿತ್ತು. 2018ರಲ್ಲೂ ಭಾರತ ಈ ಸಾಧನೆಯನ್ನು ಮರುಕಳಿಸುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.