ನವದೆಹಲಿ: ಪ್ರಜಾಪ್ರಭುತ್ವದಲ್ಲಿ ಹಿಂಸಾತ್ಮಕ ಬೆದರಿಕೆಗಳನ್ನು, ದೈಹಿಕ ಹಲ್ಲೆ ಮಾಡಲು ಬಹುಮಾನ ಘೋಷಣೆಯಂತಹ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಪದ್ಮಾವತಿ ಸಿನಿಮಾಗೆ ಸಂಬಂಧಿಸಿ ದೇಶದಲ್ಲಿ ವಿವಾದಗಳು ಭುಗಿಲೇಳಿದ್ದಿರುವ ಸಂದರ್ಭದಲ್ಲೇ ನಾಯ್ಡು ಈ ಹೇಳಿಕೆ ನೀಡಿದ್ದು ಮಹತ್ವ ಪಡೆದುಕೊಂಡಿದೆ. ಪದ್ಮಾವತಿ ಸಿನಿಮಾವನ್ನು ಉಲ್ಲೇಖ ಮಾಡದೆ ಅವರು ಈ ಹೇಳಿಕೆ ನೀಡಿದ್ದಾರೆ.
ದೇಶದ ಕಾನೂನನ್ನು ಉಲ್ಲಂಘಿಸುವವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಪ್ರಜಾಪ್ರಭುತ್ವದಡಿ ಪ್ರತಿಭಟನೆ ನಡೆಸಲು ಅವಕಾಶವಿದೆ. ಹಾಗಂತ ಬೆದರಿಕೆಯನ್ನು ಒಡ್ಡಲು ಅವಕಾಶವಿಲ್ಲ ಎಂದಿದ್ದಾರೆ. ಅಲ್ಲದೇ ಜನರ ಭಾವನೆಗಳಿಗೂ ಬೆಲೆ ಕೊಡಬೇಕಿದೆ ಎಂದರು.
‘ಜನ ಹಲ್ಲೆ ನಡೆಸಿದವರಿಗೆ 1 ಕೋಟಿ ರೂಪಾಯಿಯಷ್ಟು ಬಹುಮಾನಗಳನ್ನು ಘೋಷಿಸಿದ್ದಾರೆ. ಅವರ ಬಳಿ ಅಷ್ಟೊಂದು ಹಣ ಇದೆಯೇ ಎಂಬುದು ನನಗೆ ಅನುಮಾನ, ರೂ.1 ಕೋಟಿಯನ್ನು ಹೊಂದುವುದು ಅಷ್ಟೊಂದು ಸುಲಭವೇ?’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.