ನವದೆಹಲಿ: ಪ್ರಜಾಪ್ರಭುತ್ವದ ಮೂರು ಪ್ರಮುಖ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳು ಪರಸ್ಪರರ ಗಡಿಗಳನ್ನು ಅರಿತುಕೊಂಡು, ಉತ್ತಮ ಆಡಳಿತದ ಮಾದರಿಗಳಾಗಿರಬೇಕು ಎಂದು ರಾಷ್ಟ್ರಪತಿ ರಮನಾಥ ಕೋವಿಂದ್ ಹೇಳಿದ್ದಾರೆ.
ದೆಹಲಿಯಲ್ಲಿ ಇಂದು ಲಾ ಕಮಿಷನ್ ಆಫ್ ಇಂಡಿಯಾ ಮತ್ತು ನೀತಿ ಆಯೋಗ ಜಂಟಿಯಾಗಿ ಆಯೋಜಿಸಿರುವ ‘ನ್ಯಾಷನಲ್ ಲಾ ಡೇ ಕಾನ್ಫರೆನ್ಸ್’ನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಇಂದು ಸಾರ್ವಜನಿಕ ಬದುಕು ಎನ್ನುವುದು ಗಾಜಿನ ಮನೆಯಾಗಿದೆ, ಪಾರದರ್ಶಕತೆ ಮತ್ತು ಪರಿಶೀಲನೆಗಳಿಗೆ ಭಾರೀ ಬೇಡಿಕೆ ಇದೆ. ಜನರ ಈ ಕಾನೂನುಬದ್ಧ ಬೇಡಿಕೆಯ ಬಗ್ಗೆ ಕಾನೂನು ವಲಯ ಚಿಂತನೆ ನಡೆಸಬೇಕಿದೆ’ ಎಂದರು.
ಭಾರತದ ಕಾನೂನು ವಲಯದಲ್ಲಿ ಮಹಿಳಾ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಿದೆ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.