ಕೋಲ್ಕತ್ತಾ: ರಸಗುಲ್ಲಾಗೆ ಭೌಗೋಳಿಕ ಮಾನ್ಯತೆ ಪಡೆದ ಸಂಭ್ರಮದಲ್ಲಿರುವ ಕೋಲ್ಕತ್ತಾ ಬರೋಬ್ಬರಿ 9 ಕಿಲೋ ತೂಕದ ಅತೀ ದೊಡ್ಡ ರಸಗುಲ್ಲಾವೊಂದನ್ನು ತಯಾರಿಸುವ ಮೂಲಕ ವಿಶ್ವ ದಾಖಲೆ ಮಾಡಿದೆ.
ನಾಡಿಯಾ ಜಿಲ್ಲೆಯ ಎರಡು ಸ್ವಸಹಾಯ ಗುಂಪುಗಳು ಒಟ್ಟು ಸೇರಿ ಈ ಅತೀದೊಡ್ಡ ರಸಗುಲ್ಲಾವನ್ನು ತಯಾರು ಮಾಡಿವೆ. ಸಕ್ಕರೆ ಪಾಕದಲ್ಲಿ ಈ ರಸಗುಲ್ಲಾ 9 ಕೆಜಿ ತೂಗುತ್ತದೆ. ಪಾಕ ಇಲ್ಲದೇ 6 ಕೆಜಿ ತೂಗುತ್ತದೆ.
ಐದು ವೃತ್ತಿಪರ ಸಿಹಿ ತಿಂಡಿ ತಯಾರಕರು ಸೇರಿ ಈ ರಸಗುಲ್ಲಾವನ್ನು ತಯಾರು ಮಾಡಿದ್ದಾರೆ. 150 ಕೆಜೆ ಸಕ್ಕರೆ, ಐದೂವರೆ ಕೆಜಿ ಕಾಟೇಜ್ ಚೀಸ್, 400ಗ್ರಾಂ ಮೈದಾವನ್ನು ಇದಕ್ಕೆ ಬಳಸಲಾಗಿದೆ.
ಲೆಜೆಂಡರಿ ಸ್ವೀಟ್ ಮೇಕರ್ ಹರ್ಧನ್ ಮಂಡಲ್ ಅವರಿಗೆ ಗೌರವಾರ್ಥವಾಗಿಯೂ ಈ ರಸಗುಲ್ಲಾ ಸಮರ್ಪಿಸಲಾಗಿದೆ.
ಇದೀಗ ಈ ರಸಗುಲ್ಲಾ ವಿಶ್ವದ ಅತೀದೊಡ್ಡ ರಸಗುಲ್ಲಾ ಎಂಬ ವಿಶ್ವದಾಖಲೆಯನ್ನು ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.