ನವದೆಹಲಿ: ಆಧಾರ್ ಸಂಖ್ಯೆಯಿಂದಾಗಿ ಕಳೆದ ಕೆಲವು ತಿಂಗಳಲ್ಲಿ 500 ನಾಪತ್ತೆಯಾದ ಮಕ್ಕಳನ್ನು ಪತ್ತೆ ಪೋಷಕರ ಮಡಿಲು ಸೇರಿದ್ದಾರೆ ಎಂದು ವಿಭಿನ್ನ ಗುರುತಿನ ಚೀಟಿ ಪ್ರಾಧಿಕಾರದ ಸಿಇಓ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.
‘ಒಂಟಿಯಾಗಿ ಸಿಕ್ಕ ಮಕ್ಕಳನ್ನು ಆಧಾರ್ ಕೇಂದ್ರಕ್ಕೆ ಕರೆದುಕೊಂಡು ಹೋಗಿ ನೋಂದಾವಣಿ ಮಾಡುವಾಗ ಅವರು ಮೊದಲೇ ಆಧಾರ್ ಪಡೆದಿರುವುದು ಪತ್ತೆಯಾಗಿದೆ. ಬಳಿಕ ಅದರಲ್ಲಿನ ವಿಳಾಸ ಪಡೆದು ಅವರನ್ನು ಅವರ ಹೆತ್ತವರೊಂದಿಗೆ ಸೇರಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ಸರ್ಕಾರದ ವರದಿಯ ಪ್ರಕಾರ ಪ್ರತಿನಿತ್ಯ ಭಾರತದಲ್ಲಿ 180 ಮಕ್ಕಳು ನಾಪತ್ತೆಯಾಗುತ್ತಾರೆ. ಅವರಲ್ಲಿ ಕೆಲವೇ ಕೆಲವು ಮಕ್ಕಳು ಮಾತ್ರ ತಮ್ಮ ಪೋಷಕರೊಂದಿಗೆ ಮತ್ತೆ ಸೇರುತ್ತಾರೆ. ಉಳಿದವರು ಏನಾಗುತ್ತಾರೆ ಎಂಬ ಸುಳಿವೂ ಸಿಗುವುದಿಲ್ಲ.
ಇದೀಗ ಆಧಾರ್ನಿಂದಾಗಿ ಕೆಲವೊಂದು ಮಕ್ಕಳ ಪೋಷಕರನ್ನು ಪತ್ತೆ ಮಾಡುವ ಕಾರ್ಯ ಸುಲಭವಾಗಿದೆ ಎಂದು ಪಾಂಡೆ ಅಭಿಪ್ರಾಯಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.