ನವದೆಹಲಿ: ಭಾರತದಲ್ಲಿನ ಐಸ್ ಕ್ರೀಂ ತಯಾರಕ ಕಂಪನಿಯೊಂದು ತನ್ನ ಐಸ್ ಕ್ರೀಂ ಕೋನೊಂದಕ್ಕೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಹೆಸರಿಟ್ಟು ಭಾರೀ ಟೀಕೆಗೆ ಒಳಗಾಗಿದೆ.
ಈ ಐಸ್ಕ್ರೀಂಗೆ ಹಿಟ್ಲರ್ ಎಂದು ಹೆಸರಿಟ್ಟದ್ದು ಮಾತ್ರವಲ್ಲದೇ, ಅದರ ಪ್ಯಾಕೇಟ್ ಮೇಲೆ ಹಿಟ್ಲರ್ನ ಭಾವಚಿತ್ರವನ್ನೂ ಹಾಕಲಾಗಿದೆ. ಇದಕ್ಕೆ ಜರ್ಮನಿಗರಿಂದ ಆಕ್ಷೇಪ ವ್ಯಕ್ತವಾಗಿದೆ. ಅಲ್ಲದೇ ಭಾರತೀಯರು ಕೂಡ ಇದೊಂದು ಅಭಿರುಚಿ ಹೀನ ಕಾರ್ಯ ಎಂದು ಟೀಕಿಸಿದ್ದಾರೆ.
ಈ ಐಸ್ಕ್ರೀಂ ಪ್ರಚಾರಕ್ಕಾಗಿಯೇ ಇತಂಹ ಗಿಮಿಕನ್ನು ಮಾಡಿದೆ ಎಂದು ಹೇಳಲಾಗಿದೆ, ಆದರೆ ಪ್ರಚಾರದ ಬದಲು ಇದರ ವಿರುದ್ಧ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ಈ ಹಿಂದೆ ಮುಂಬಯಿಯೊಂದರಲ್ಲಿ ಹಿಟ್ಲರ್ ಹೆಸರಿನ ರೆಸ್ಟೋರೆಂಟನ್ನು ತೆರೆಯಲಾಗಿತ್ತು, ಅದಕ್ಕೂ ಆಕ್ಷೇಪಗಳು ವ್ಯಕ್ತವಾದ ಹಿನ್ನಲೆಯಲ್ಲಿ ಅದನ್ನು ಮುಚ್ಚಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.