ನವದೆಹಲಿ: ಸಾರ್ವಜನಿಕ ವಾಹನಗಳನ್ನು ಬಳಸಿ ಭಯೋತ್ಪಾದಕರು ದಾಳಿಗಳನ್ನು ನಡೆಸಿದ ಘಟನೆಗಳು ಇತ್ತೀಚಿಗೆ ಜಗತ್ತಿನಲ್ಲಿ ನಡೆದಿದೆ. ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ (ಎನ್ಎಸ್ಜಿ) ತನ್ನ ಕಮಾಂಡೋಗಳಿಗೆ ಇಂತಹ ಪರಿಸ್ಥಿತಿಗಳನ್ನು ಎದುರಿಸುವ ಬಗ್ಗೆ ಎಕ್ಸ್ಕ್ಲೂಸಿವ್ ತರಬೇತಿಗಳನ್ನು ನೀಡುತ್ತಿದೆ.
ಇತ್ತೀಚಿಗೆ ಭಯೋತ್ಪಾದನಾ ಸಂಘಟನೆ ಐಎಸ್ 10 ನಿಮಿಷದ ಆಡಿಯೋ ಬಿಡುಗಡೆ ಮಾಡಿ ಇದರಲ್ಲಿ ಕುಂಭ ಮೇಳ ಮತ್ತು ತ್ರಿಶ್ಶೂರ್ ಪೂರಂ ಸಂದರ್ಭದಲ್ಲಿ ಲಾಸ್ ಏಂಜಲೀಸ್ ಮಾದರಿಯಲ್ಲಿ ದಾಳಿ ನಡೆಸುವ ಎಚ್ಚರಿಕೆಯನ್ನು ನೀಡಿದೆ.
ಈ ಹಿನ್ನಲೆಯಲ್ಲಿ ಕಮಾಂಡೋಗಳು ಇಂತಹ ಪರಿಸ್ಥಿತಿಗಳನ್ನು ಎದುರಿಸಲು ಸನ್ನದ್ಧರಾಗುತ್ತಿದ್ದಾರೆ. ಇದಕ್ಕೆ ಬೇಕಾದ ತರಬೇತಿಗಳನ್ನು ಅವರಿಗೆ ಕೊಡಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.