ನವೆಂಬರ್ 18, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ, ಸ್ವಾತಂತ್ರ್ಯಸಂಗ್ರಾಮದ ವೀರ ತ್ರಿವಿಕ್ರಮರಲ್ಲಿ ಒಬ್ಬರು ಬಟುಕೇಶ್ವರ ದತ್ ಜನ್ಮ ದಿನವಿಂದು. ಭಗತ್ ಸಿಂಗ್ ರ ಜೊತೆಗೂಡಿ ಅಸೆಂಬ್ಲಿಯಲ್ಲಿ ಬಾಂಬ್ ಸಿಡಿಸಿ ಬ್ರಿಟಿಷರ ನಿದ್ದೆಗೆಡಿಸಿದ ನಮ್ಮ ದೇಶ ಕಂಡ ಶ್ರೇಷ್ಠ ಕ್ರಾಂತಿಕಾರಿ ಬಟುಕೇಶ್ವರ ದತ್.
ಅಂಡಮಾನಿನಲ್ಲಿ ಸೆರೆಮನೆಗಳ ತೀಕ್ಷ್ಣ ಕ್ರೌರ್ಯವನ್ನು ಅನುಭವಿಸಿದರು. ದೇಶ ಸ್ವತಂತ್ರವಾಗುವವರೆಗೆ ಅವರ ಹೋರಾಟ ನಿಲ್ಲಲಿಲ್ಲ. ಸ್ವತಂತ್ರವಾದ ಮೇಲೆ ತಮ್ಮ ಹೋರಾಟದಿಂದ ವೈಯಕ್ತಿಕ ಲಾಭ ಪಡೆಯಲು ಅವರು ಇಷ್ಟ ಪಡಲಿಲ್ಲ.
ಗೋಷ್ಟಾ ಬಿಹಾರಿ ದತ್ ಅವರ ಮಗನಾಗಿ ಪೂರ್ಬಾ ಬರ್ಧಮಾನ್ನ (ಈಗ ಪಶ್ಚಿಮ ಬಂಗಾಳ ಎಂದು ಕರೆಯಲ್ಪಡುತ್ತಿದೆ) ಓರಿ ಗ್ರಾಮದಲ್ಲಿ 1910ರ ನವೆಂಬರ್ 18 ರಂದು ಬಟುಕೇಶ್ವರ ದತ್ ಜನಿಸಿದರು.
ಸ್ವಾತಂತ್ರ್ಯ ಸಂಗ್ರಾಮದ ವೀರ ತ್ರಿವಿಕ್ರಮರಲ್ಲಿ ಒಬ್ಬರಾದ ಬಟುಕೇಶ್ವರ್ ದತ್ ಹೆಸರು ಅವರ ಒಡನಾಡಿಗಳಾಗಿದ್ದ ಭಗತ್ ಸಿಂಗ್, ಚಂದ್ರಶೇಖರ್ ಅಜಾದ್, ರಾಜ್ಗುರು ಅವರ ಹೆಸರುಗಳೊಂದಿಗೆ ಇತಿಹಾಸದ ಪುಟಗಳಲ್ಲಿ ಚಿರಸ್ಥಾಯಿಯಾಗಿ ಉಳಿದಿದೆ.
ಕಾರಣ, 1929 ರ ಏಪ್ರಿಲ್ನಲ್ಲಿ ಭಗತ್ ಸಿಂಗ್ ಒಡಗೂಡಿ ಪಂಜಾಬ್ ಅಸೆಂಬ್ಲಿಗೆ ಹಾಕಿದ ಬಾಂಬ್. ಇದಕ್ಕಾಗಿ ಬಂಧನಕ್ಕೊಳಗಾದ ನಂತರ, ದತ್ ಹಾಗೂ ಸಿಂಗ್ ಇಬ್ಬರೂ ಭಾರತೀಯ ರಾಜಕೀಯ ಕೈದಿಗಳ ಹಕ್ಕುಗಳು ಹಾಗೂ ಅವರ ಸ್ಥಿತಿಗತಿಗಳನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸಿದರು.
ದತ್, ಭಾರತದ ಮೊದಲ ಮಾರ್ಕ್ಸ್ವಾದಿ ಪಕ್ಷಗಳಲ್ಲಿ ಒಂದಾದ ಹಿಂದುಸ್ಥಾನ್ ಸೋಷಿಯಲಿಸ್ಟ್ ಪಾರ್ಟಿಯ ಸದಸ್ಯರಾಗಿದ್ದರು.
ಬ್ರಿಟಿಶ್ ಅಧಿಕಾರಿ ಸಾಂಡರ್ಸ್ ಕೊಲೆ ಆಪಾದನೆ ಮೇಲೆ ಗಲ್ಲು ಶಿಕ್ಷೆಗೊಳಗಾದ ತನ್ನ ಒಡನಾಡಿಗಳಂತೆ ಅಲ್ಪಾಯುವಾಗದ ಬಟುಕೇಶ್ವರ್ ದತ್, ಸೆರೆಮನೆಯಿಂದ ಬಿಡುಗಡೆಗೊಂಡ ನಂತರ ಕ್ವಿಟ್ ಇಂಡಿಯ ಚಳುವಳಿಯಲ್ಲೂ ಸಹ ಭಾಗವಹಿಸಿದರು. ತಾನು ಮತ್ತು ತನ್ನ ಒಡನಾಡಿಗಳೆಲ್ಲರೂ ಯಾವ ಘನ ಉದ್ದೇಶಕ್ಕಾಗಿ ಹೋರಾಡಿದರೊ ಆ ಸ್ವಾತಂತ್ರ್ಯವನ್ನು ತನ್ನ ದೇಶ ಭಾರತ ಕಂಡದ್ದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿ ಉಳಿದರು.
1965ರ ಜುಲೈನಲ್ಲಿ ಮರಣ ಹೊಂದಿದ ಬಟುಕೇಶ್ವರ್ ದತ್ರವರ ಪಾರ್ಥಿವ ಶರೀರವನ್ನು ಅವರ ಒಡನಾಡಿಗಳಾದ ಭಗತ್ ಸಿಂಗ್, ರಾಜ್ಗುರು ಹಾಗೂ ಸುಖ್ದೇವ್ ಅವರನ್ನು ಸಮಾಧಿ ಮಾಡಿದ ಸ್ಥಳದಲ್ಲಿಯೇ ಮಣ್ಣು ಮಾಡಲಾಯಿತು.
ವಂದೇ ಮಾತರಂ!
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.