ಮನಿಲ: ಫಿಲಿಪೈನ್ಸ್ನ ಲಾಸ್ ಬನೊಸ್ನಲ್ಲಿನ ರೈಸ್ ಫೀಲ್ಡ್ ಲ್ಯಾಬೋರೇಟರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಇಡಲಾಗಿದೆ.
ಇಂಟರ್ನ್ಯಾಷನಲ್ ರೈಸ್ ರಿಸರ್ಚ್ ಇನ್ಸ್ಟಿಟ್ಯೂಟ್ (ಐಆರ್ಆರ್ಐ)ನಲ್ಲಿ ಶ್ರೀ ನರೇಂದ್ರ ಮೋದಿ ರೆಸಿಲಿಯಂಟ್ ರೈಸ್ ಫೀಲ್ಡ್ ಲ್ಯಾಬೋರೇಟರಿಯನ್ನು ನಿರ್ಮಿಸಲಾಗಿದ್ದು, ಅದನ್ನು ಸೋಮವಾರ ಮೋದಿಯವರಿಂದಲೇ ಲೋಕಾರ್ಪಣೆಗೊಳಿಸಲಾಯಿತು.
ಬಳಿಕ ಮೋದಿ ಈ ಲ್ಯಾಬೋರೇಟರಿಗೆ ಎರಡು ಭಾರತೀಯ ಅಕ್ಕಿ ತಳಿಯನ್ನು ನೀಡಿದರು.
ರೈಸ್ ಸೈನ್ಸ್ ಮೂಲಕ ಬಡತನ, ಹಸಿವನ್ನು ನೀಗಿಸುವ ಕಾರ್ಯವನ್ನು ಇಂಟರ್ನ್ಯಾಷನಲ್ ರೈಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಮಾಡುತ್ತಿದೆ. ರೈತರ ಆರೋಗ್ಯ, ಸಿರಿತನವನ್ನು ವೃದ್ಧಿಸುವ ಗುರಿಯೂ ಇದರದ್ದು, ಮುಂದಿನ ತಲೆಮಾರಿಗೆ ಭತ್ತ ಬೆಳೆಯುವ ಪರಿಸರವನ್ನು ಉಳಿಸುವ ಕಾರ್ಯ ಮಾಡುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.