ತಿರುವನಂತಪುರಂ: ರಸ್ತೆ ಅಗಲೀಕರಣಕ್ಕೆ ಭೂಮಿ ವಶ ಸೇರಿದಂತೆ ಇತರ ಕಾಮಗಾರಿಗಳಿಗೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿರುವ ಸಂದರ್ಭದಲ್ಲೇ ಕೇರಳದ ಸಂಪುಟ ಸಚಿವರೊಬ್ಬರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಯೋಜನೆಗಾಗಿ ತಮ್ಮ ಮನೆಯನ್ನೇ ಬಿಟ್ಟುಕೊಟ್ಟಿದ್ದಾರೆ.
ಸಾರ್ವಜನಿಕ ಕಾರ್ಯ ಇಲಾಖಾ ಸಚಿವ ಜಿ.ಸುಧಾಕರಣ್ ಅವರು ರಸ್ತೆಗಾಗಿ ಭೂಮಿ ವಶಪಡಿಸಿಕೊಂಡ ಹಿನ್ನಲೆಯಲ್ಲಿ ತೊಕ್ಕುಕುಲಂನಲ್ಲಿನ ತಮ್ಮ ನಿವಾಸ ಬಿಟ್ಟು ತೆರಳಿದ್ದಾರೆ.
ಕಳೆದ 35 ವರ್ಷಗಳಿಂದ ಅವರು ಇಲ್ಲಿ ವಾಸವಾಗಿದ್ದರು. ಆದರೆ ರಸ್ತೆ ಅಗಲೀಕರಣಕ್ಕಾಗಿ ಈ ಪ್ರದೇಶದ ಶೇ.50ರಷ್ಟು ಮನೆಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ. ಇದಕ್ಕೆ ಮನ್ನಣೆ ಕೊಟ್ಟು ಅವರು ಕುಟುಂಬ ಸಮೇತರಾಗಿ ಬೇರೆಡೆಗೆ ತೆರಳಿದ್ದಾರೆ.
ತಮ್ಮ ಮನೆಯನ್ನು ರಕ್ಷಿಸಲು ಬಡವರ ಮನೆಯ ಮೇಲೆ ಬುಲ್ಡೋಜರ್ ಹತ್ತಿಸುವ ರಾಜಕಾರಣಿಗಳ ನಡುವೆ ಸುಧಾಕರಣ್ ಭಿನ್ನವಾಗಿ ಕಾಣುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.