ಶಾಲೆಯಿಂದ ವಂಚಿತಗೊಂಡಿರುವ, ಡ್ರಾಪ್ ಔಟ್ ಆಗಿರುವ, ಕೂಲಿ-ನಾಲಿ ಮಾಡುತ್ತಿರುವ ಬಡವರ ಮಕ್ಕಳಿಗೆಂದೇ ಮೈಸೂರಿನಲ್ಲೊಂದು ಶಾಲೆಯಿದೆ. ಕಲಿಯಲು ಆಸಕ್ತಿಯಿರುವ ಮತ್ತು ಕಲಿಯುವಿಕೆಯಲ್ಲಿ ಆಸಕ್ತಿಯನ್ನು ಮೂಡಿಸುವ ಬಲು ಅಪರೂಪದ ವಿಭಿನ್ನ ಶಾಲೆಯಿದು. ಇದಕ್ಕೆ ’ಕಲಿಯುವ ಮನೆ’ ಎಂದೇ ಹೆಸರಿಸಲಾಗಿದೆ.
ಮೈಸೂರಿನಿಂದ 15 ಕಿಲೋಮೀಟರ್ ದೂರದಲ್ಲಿರುವ ಕುಗ್ರಾಮ ಕೆಂಚಲಗೂಡುವಿನಲ್ಲಿ ‘ಕಲಿಯುವ ಮನೆ’ ಇದೆ. ವ್ಯವಸ್ಥೆಯಿಂದ ದೂರವಿರುವ, ಬಾಲ ಕಾರ್ಮಿಕ, ಬಡ ಹಿನ್ನಲೆಯ ಮಕ್ಕಳಿಗೆಂದು ಇರುವ ಶಾಲೆಯಿದು. ವಿದ್ಯೆಯ ಮಹತ್ವದ ಬಗ್ಗೆ ಅರಿವಿರದ ಪೋಷಕರ ಮಕ್ಕಳಿಗೆ ಈ ಶಾಲೆ ಆಶ್ರಯ ನೀಡುತ್ತಿದೆ.
ಶಾಲೆಯ ಆವರಣದಾದ್ಯಂತ ಓಡಾಡುವ, ಅನಿಸಿದ್ದನ್ನು ಮಾಡುವ ಸ್ವಾತಂತ್ರ್ಯ ಇಲ್ಲಿ ಮಕ್ಕಳಿಗಿದೆ. ಶಿಕ್ಷಕರು ಸದಾ ಮಕ್ಕಳ ಮೇಲೆ ಕಣ್ಣಿಟ್ಟಿರುತ್ತಾರೆ. ಆದ್ರೆ ಅವರ ಮೇಲೆ ಯಾವುದೇ ಒತ್ತಡ ಹೇರುವುದಿಲ್ಲ. ಅವರ ವೈಯಕ್ತಿಕ ಅವಶ್ಯಕತೆಗಳಿಗೆ ಅನುಗುಣವಾಗಿ ಪಠ್ಯವನ್ನು ಸಿದ್ಧಪಡಿಸಲಾಗುತ್ತದೆ.
ಗ್ರೇಡ್ಗಳ ಬದಲು ಇಲ್ಲಿ ಟೀಮ್ಗಳಿದ್ದು, ಈ ಟೀಮ್ಗಳಿಗೆ ಚೇತನಾ, ಚೈತನ್ಯ, ವಿವೇಕ ಎಂಬ ಹೆಸರುಗಳಿವೆ. ಪ್ರತಿ 10 ಮಕ್ಕಳಿಗೆ ಒಂದು ಶಿಕ್ಷಕರಿದ್ದಾರೆ. ಕೆಲವರು ವೇತನ ಪಡೆಯುವವರಾದರೆ, ಕೆಲವರು ಸ್ವಯಂಪ್ರೇರಣೆಯಿಂದ ಕಲಿಸುವವರು.
ಕನ್ನಡ, ಇಂಗ್ಲೀಷ್, ಗಣಿತ, ಸಮಾಜ ವಿಜ್ಞಾನ ಸೇರಿದಂತೆ ನೈರ್ಮಲ್ಯ, ನೈತಿಕ ಶಿಕ್ಷಣವನ್ನೂ ಇಲ್ಲಿ ಕಲಿಸಿಕೊಡಲಾಗುತ್ತದೆ.
2005ರಲ್ಲಿ ಅನಂತ್ ಕುಮಾರ್ ಎಂಬುವವರು ಈ ಶಾಲೆಯನ್ನು ಸ್ನೆಹಿತರೊಂದಿಗೆ ಸೇರಿ ಸ್ಲಂನಲ್ಲಿನ ಮಕ್ಕಳಿಗಾಗಿ ಆರಂಭಿಸಿದ್ದರು. ವಿವಿಧ ಸಂಸ್ಥೆಗಳ ನೆರವಿನೊಂದಿಗೆ ಇದು ಕಾರ್ಯವನ್ನು ಮುಂದುವರೆಸುತ್ತಾ ಬರುತ್ತಿದೆ. 14 ಮಕ್ಕಳಿಂದ ಆರಂಭವಾದ ಈ ಶಾಲೆಯಲ್ಲಿ ಈಗ 114 ಮಕ್ಕಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.