ನವದೆಹಲಿ: ಇದೇ ಮೊದಲ ಬಾರಿಗೆ ಭಾರತ ಹಿಂದೂ ಮಹಾಸಾಗರದಲ್ಲಿನ ಚಲನವಲನಗಳ ರಿಯಲ್ ಟೈಮ್ ಮರಿಟೈಮ್ ಇಂಟೆಲಿಜೆನ್ಸ್ನ್ನು 10 ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲು ನಿರ್ಧರಿಸಿದೆ.
ದಕ್ಷಿಣ-ಚೀನಾ ಸಮುದ್ರ ಭಾಗದಲ್ಲಿನ ಮಾನವ ಕಳ್ಳಸಾಗಾಣಿಕೆ, ಸ್ಮಗ್ಲಿಂಗ್, ಗಡಿ ವಿವಾದಗಳಂತಹ ಅಪಾಯಗಳನ್ನು ಎದುರಿಸುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಇಂಡೋನೇಷ್ಯಾ, ಮಲೇಷ್ಯಾ, ಥಾಯ್ಲೆಂಡ್, ಶ್ರೀಲಂಕಾ, ಮಾರೇಶಿಯಸ್ ಸೇರಿದಂತೆ 10 ರಾಷ್ಟ್ರಗಳೊಂದಿಗೆ ಇನ್ನು ಮುಂದೆ ಭಾರತ ಮರಿಟೈಮ್ ಇಂಟೆಲಿಜೆನ್ಸ್ ರಿಪೋರ್ಟ್ಗಳನ್ನು ಹಂಚಿಕೊಳ್ಳಲಿದೆ.
ದಕ್ಷಿಣ ಚೀನಾ ಸಮುದ್ರ ಭಾಗದಲ್ಲಿ ಚೀನಾ ಅತ್ಯಂತ ಆಕ್ರಮಣಕಾರಿ ಧೋರಣೆಯನ್ನು ತೋರಿಸುತ್ತಿರುವುದಕ್ಕೆ ಪ್ರತಿಯಾಗಿ ಭಾರತ ಈ ತಂತ್ರವನ್ನು ಅನುರಿಸಿದೆ.
ಗೋವಾದಲ್ಲಿ ನಡೆಯುತ್ತಿರುವ ’ಗೋವಾ ಮರಿಟೈಮ್ ಕಾನ್ಕ್ಲೇವ್’ನಲ್ಲಿ ನೌಕಾ ಮುಖ್ಯಸ್ಥ ಅಡ್ಮಿರಲ್ ಸುನೀಲ್ ಲಾಂಬಾ ಈ ಮಾಹಿತಿ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.