ಹೈದರಾಬಾದ್: ಭಾರತವೂ ಜಾಗತಿಕ ಭಯೋತ್ಪಾದನೆಯ ಪರಿಣಾಮಗಳನ್ನು ಎದುರಿಸಿದೆ, ಆದರೆ ಇಸಿಸ್ನಂತಹ ನಟೋರಿಯಸ್ ಭಯೋತ್ಪಾದನ ಸಂಘಟನೆಗಳ ಯೋಜನೆಗಳನ್ನು ವಿಫಲಗೊಳಿಸಲು ನಮ್ಮ ಗುಪ್ತಚರ ಇಲಾಖೆ ಮತ್ತು ಭದ್ರತಾ ಪಡೆಗಳು ಯಶಸ್ವಿಯಾಗಿವೆ ಎಂಬುದಾಗಿ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಹೈದರಾಬಾದ್ನ ಸರ್ದಾರ್ ವಲ್ಲಭಾಭಾಯ್ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡಮಿಯಲ್ಲಿ ಐಪಿಎಸ್ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಮುಂದಿನ ಐದು ವರ್ಷ ಪ್ರಮುಖವಾಗಿ ಜಮ್ಮು ಕಾಶ್ಮೀರ, ಈಶಾನ್ಯ ಭಾಗದಲ್ಲಿ ಭಯೋತ್ಪಾದನೆ ಮತ್ತು ಕೋಮುವಾದಕ್ಕೆ ಸಂಬಂಧಿಸಿದ ಸವಾಲುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅತೀ ಮಹತ್ವದ್ದಾಗಿದೆ’ ಎಂದರು.
‘ತೀವ್ರಗಾಮಿ ಮತ್ತು ಉಗ್ರಗಾಮಿ ಸಮಸ್ಯೆಗಳನ್ನು ವಿಶ್ವ ಇಂದು ಎದುರಿಸುತ್ತಿದೆ. ಅಂತರ್ಜಾಲಗಳನ್ನು ಇಸಿಸ್ನಂತಹ ಸಂಘಟನೆಗಳು ದ್ವೇಷ ಹರಡಿಸಲು ಬಳಕೆ ಮಾಡುತ್ತಿವೆ. ಭಾರತವೂ ಈ ಸಮಸ್ಯೆಯಿಂದ ಹೊರತಾಗಿಲ್ಲ’ ಎಂದರು.
‘ಭಾರತದಲ್ಲೂ ಕೆಲವರು ಇಸಿಸ್ನ ಪ್ರಭಾವಕ್ಕೆ ಒಳಗಾಗಿದ್ದಾರೆ. ಆದರೆ ಉಳಿದ ದೇಶಗಳಿಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ. ನಮ್ಮ ದೇಶದ ಜನ ನಂಬಿರುವ ಸಾಮಾಜಿಕ ಮತ್ತು ಧಾರ್ಮಿಕ ಸೌಹಾರ್ದತೆ ಇದಕ್ಕೆ ಕಾರಣ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.