ಗುಹಾಹಟಿ: ಈಶಾನ್ಯ ಭಾಗದ ಮೊತ್ತ ಮೊದಲ ಮೆಗಾ ಫುಡ್ ಪಾರ್ಕ್ ಅಸ್ಸಾಂನ ನಲ್ಬರಿ ಜಿಲ್ಲೆಯ ನತ್ಕುಚಿಯಲ್ಲಿ ಗುರುವಾರ ಉದ್ಘಾಟನೆಗೊಳ್ಳಲಿದೆ.
ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ಸಚಿವೆ ಹರ್ಸಿಮ್ರಾಟ್ ಕೌರ್ ಬಾದಲ್ ಮತ್ತು ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗೈ, ಗೃಹಖಾತೆ ರಾಜ್ಯ ಸಚಿವೆ ಕಿರಣ್ ರಿಜ್ಜು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಕೃಷ್ಟಿ ಉತ್ಪನ್ನಗಳು ವ್ಯರ್ಥವಾಗುವುನ್ನು ತಡೆಯಲು, ರೈತರಿಗೆ ಸಿದ್ಧ ಗ್ರಾಹಕರನ್ನು ನೀಡಲು ಮತ್ತು ಗುಣಮಟ್ಟದ ಕಚ್ಛಾವಸ್ತುಗಳನ್ನು ಪೂರೈಕೆ ಮಾಡುವ ಉದ್ದೇಶದೊಂದಿಗೆ ಈ ಮೆಗಾ ಫುಡ್ ಪಾರ್ಕ್ನ್ನು ಆರಂಭಿಸಲಾಗಿದೆ.
ಇದರಲ್ಲಿ 27 ಆಹಾರ ಸಂಸ್ಕರಣಾ ಯುನಿಟ್ಗಳಿದ್ದು, 50 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿದೆ.
ಸುಮಾರು 3 ಸಾವಿರ ಜನರಿಗೆ ಇದು ಉದ್ಯೋಗ ಅವಕಾಶವನ್ನು ಕಲ್ಪಿಸಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.