ನವದೆಹಲಿ: ಪಾಕಿಸ್ಥಾನ ಸ್ವತಃ ತನ್ನ ಒಳಿತಿಗಾಗಿ ಇತರ ದೇಶಗಳ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದನ್ನು ನಿಲ್ಲಿಸಬೇಕು ಮತ್ತು ತನ್ನ ವಿನಾಶಕಾರಿ ಯೋಚನೆಗಳಿಗೆ ಅಂತ್ಯ ಹಾಡಬೇಕು ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಸಲಹೆ ನೀಡಿದ್ದಾರೆ.
ಬುಧವಾರ ಜಮ್ಮುವಿನಲ್ಲಿ ಜನ್ ಕಲ್ಯಾಣ್ ಪರ್ವ್ ಉದ್ಘಾಟಿಸಿ ಮತನಾಡಿದ ಅವರು ‘ಪ್ರಜಾಪ್ರಭುತ್ವ ಎಂಬುದು ಸಂವಹನ, ಆದರೆ ನಮ್ಮ ದೇಶದೊಳಗೆ ಯಾರೊಬ್ಬರೂ ಪಾಕ್ ಪರ ಘೋಷಣೆ ಕೂಗುವುದನ್ನು ನಾವು ಸಹಿಸಿಕೊಳ್ಳುವುದಿಲ್ಲ’ ಎಂದಿದ್ದಾರೆ.
ಭಾರತದ ಘನತೆ, ಸಾರ್ವಭೌಮತೆ, ಸಮಗ್ರತೆಗೆ ಧಕ್ಕೆಯುಂಟು ಮಾಡುವವರಿಗೆ ಈ ದೇಶ ತಕ್ಕ ಪ್ರತ್ಯುತ್ತರ ನೀಡುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ನಮ್ಮ ಸೇನೆಯನ್ನು, ನಮ್ಮ ಅರೆಸೇನಾ ತುಕಡಿಯನ್ನು, ನಮ್ಮ ಪಡೆಗಳನ್ನು ನಾವು ನಂಬುತ್ತೇವೆ. ಅವರ ಸಮಗ್ರತೆಯನ್ನು ಮತ್ತು ದೇಶಪ್ರೇಮವನ್ನು ಎಂದಿಗೂ ಪ್ರಶ್ನಿಸಕೂಡದು ಎಂದರು.
ಭಾರತ ಪಾಕಿಸ್ಥಾನ ಸೇರಿದಂತೆ ತನ್ನ ಎಲ್ಲಾ ನೆರೆಯ ರಾಷ್ಟ್ರಗಳಿಗೂ ಸ್ನೇಹ ಹಸ್ತ ಚಾಚುತ್ತದೆ, ಆದರೆ ಪಾಕಿಸ್ಥಾನ ಮಾತ್ರ ಪ್ರತಿಬಾರಿಯೂ ಉಲ್ಟಾ ಹೊಡೆಯುತ್ತದೆ ಎಂದರು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಾಕ್ ಸ್ನೇಹ ಮಾಡಲು ಮುಂದಾದರು,ಆದರೆ ಹಿಂದಿನಿಂದ ಬಂದು ಚೂರಿ ಹಾಕಿತು ಎಂದರು.
ಈ ದೇಶ ಹಿಂದೂ, ಕ್ರೈಸ್ಥ, ಮುಸಲ್ಮಾನ ಸೇರಿದಂತೆ ಎಲ್ಲಾ ಭಾರತೀಯರದ್ದು, ಈ ನೆಲದಲ್ಲಿ ಪಾಕ್ ಜಿಂದಾಬಾದ್ ಎನ್ನುವುದನ್ನು ನಾವು ಸಹಿಸುವುದಿಲ್ಲ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.