×
Home About Us Advertise With s Contact Us

ಹೀನಾಯ ಸೋಲಿನ ಕಹಿಯಿಂದ ಹೊರಬಾರದ ಕಾಂಗ್ರೆಸ್

modiನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಸೂಟು ಬೂಟಿನ ಸರ್ಕಾರ ಎಂಬ ಟೀಕೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ 2014ರ ಲೋಕಸಭಾ ಚುನಾವಣೆಯ ಸೋಲಿನಿಂದ ಇನ್ನೂ ಹೊರಬಂದಿಲ್ಲ ಎಂದಿದ್ದಾರೆ.

ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ಸಂದರ್ಶನ ನೀಡಿರುವ ಅವರು, ಎಲ್ಲಾ ಅಧಿಕಾರ ಪ್ರಧಾನಿಯ ಬಳಿಕ ಕೇಂದ್ರಿತವಾಗಿದೆ ಎಂಬ ಆರೋಪವನ್ನು ತಳ್ಳಿಹಾಕಿದರು.

ಪ್ರಧಾನಿ ಮತ್ತು ಪ್ರಧಾನಿ ಸಚಿವಾಲಯ ಸಾಂವಿಧಾನಿಕ ಯೋಜನೆಯ ಒಂದು ಅಂಗವಾಗಿದೆ ಆದರೆ ಸಾಂವಿಧಾನಿಕ ಹೆಚ್ಚುವರಿ ಅಧಿಕಾರಗಳು ಯುಪಿಎ ಅವಧಿಯ ಶಕ್ತಿಶಾಲಿ ಅಸ್ತ್ರವಾಗಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಯಾವುದೇ ಸಮುದಾಯದ ವಿರುದ್ಧ ತಾರತಮ್ಯ ಅಥವಾ ಹಿಂಸೆ ಸಹಿಸಲು ಅಸಾಧ್ಯವಾದುದು ಎಂದರು.

ಭೂಸ್ವಾಧೀನ ಮಸೂದೆಯಲ್ಲಿ ಬಡವರ, ರೈತರ, ಹಳ್ಳಿಗರ ಪರವಾಗಿ ಯಾವುದೇ ಸಲಹೆ ಸೂಚನೆಗಳಿದ್ದರೆ ಅದನ್ನು ನಾವು ಸ್ವಾಗತಿಸುತ್ತೇವೆ ಎಂದರು.

ಅಲ್ಲದೇ 2014ರ ತನ್ನ ಹೀನಾಯ ಸೋಲನ್ನು ಅರಗಿಸಿಕೊಳ್ಳಲು ಒಂದು ವರ್ಷವಾದರೂ ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

 

Recent News

Back To Top
error: Content is protected !!