ನವದೆಹಲಿ: ಚೀನಾದೊಂದಿಗಿನ ಗಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯದ ವೇಗವರ್ಧಿಸಲು ಭಾರತೀಯ ಸೇನೆ ಮುಂದಾಗಿದೆ. 2020ರ ವೇಳೆಗೆ ಬಹುತೇಕ ಭಾಗಗಳಿಗೆ ರಸ್ತೆ ಸಂಪರ್ಕ ನಿಡಲು ನಿರ್ಧರಿಸಿದೆ.
ಚೀನಾದೊಂದಿಗಿನ ಗಡಿಯ ಮಧ್ಯ ವಲಯದಲ್ಲಿ ರಸ್ತೆ ನಿರ್ಮಾಣ ಚಟುವಟಿಕೆಗಳನ್ನು ಸಂಯೋಜಿತ ರೀತಿಯಲ್ಲಿ ವೃದ್ಧಿಸಲಿದ್ದೇವೆ. 2020ರ ವೇಳೆ ಗಡಿಯ ನಿತಿ, ಲಿಪುಲೆಖ್, ತಾಂಗ್ಲ, ತ್ಸಾಂಗ್ಚೊಕ್ಲಾಗಳಿಗೆ ರಸ್ತೆ ಸಂಪರ್ಕ ದೊರೆಯಲಿದೆ ಎಂದು ಸೇನೆ ಪ್ರಕಟನೆಯಲ್ಲಿ ತಿಳಿಸಿದೆ.
ಅಲ್ಲದೇ ರಸ್ತೆಗಳ ಅಭಿವೃದ್ಧಿ, ಮೂಲಸೌಕರ್ಯಗಳನ್ನು ವೃದ್ಧಿಸಲು ಬಾರ್ಡರ್ ರೋಡ್ ಆರ್ಗನೈಝೇಶನ್ಗೆ ಹೆಚ್ಚುವರಿ ಅನುದಾನ ನೀಡಲು ನಿರ್ಧರಿಸಲಾಗಿದೆ. ಸ್ಮಾಟ್ ಸಿಟಿ ಯೋಜನೆಯಡಿ ಮಿಲಿಟರಿ ಸ್ಟೇಶನ್ಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ ಎಂದಿದೆ.