ನವದೆಹಲಿ: ಜನನಿಬಿಡ ಮಾರುಕಟ್ಟೆಯಲ್ಲಿ ಮಹಿಳೆಯರಿಗೆ ನೈರ್ಮಲ್ಯಯುತ ವಾಶ್ರೂಮ್ಗಳನ್ನು ಒದಗಿಸುವ ಸಲುವಾಗಿ ದಕ್ಷಿಣ ದೆಹಲಿಯ ಮಹಾನಗರ ಪಾಲಿಕೆ ವಿಶಾಖಪುರಿಯಲ್ಲಿ ಮೊದಲ ‘ಪಿಂಕ್ ಟಾಯ್ಲೆಟ್’ನ್ನು ಉದ್ಘಾಟನೆಗೊಳಿಸಿದೆ.
ಅಂತಾರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯ ಪ್ರಯುಕ್ತ ಇದನ್ನು ಉದ್ಘಾಟನೆಗೊಳಿಸಲಾಗಿದೆ. ಸ್ಯಾನಿಟರಿ ನ್ಯಾಪ್ಕಿನ್ ವೆಂಡಿಂಗ್ ಮೆಶಿನ್, ಇನ್ಸಿನರೇಟರ್ ಸೌಲಭ್ಯ, ಹಾಲುಣಿಸುವ ಕೊಠಡಿ ಇದರಲ್ಲಿ ಇದೆ.
ವಿಶಾಖಪುರಿ ಪ್ರಮುಖ ಶಾಪಿಂಗ್ ಪ್ರದೇಶವಾಗಿದೆ. ಬಹು ಸಂಖ್ಯೆಯಲ್ಲಿ ಮಹಿಳೆಯರು ಇಲ್ಲಿಗೆ ಆಗಮಿಸುತ್ತಾರೆ.
ಅವರನ್ನು ಸಮಸ್ಯೆಗಳಿಂದ ಮುಕ್ತಗೊಳಿಸಲು ’ಪಿಂಕ್ ಟಾಯ್ಲೆಟ್’ ನ್ನು ಸ್ಥಾಪಿಸಲಾಗಿದೆ ಎಂದು ಮಹಾನಗರ ಪಾಲಿಕೆ ಹೇಳಿದೆ.