ಬುಡಕಟ್ಟು ಜನರಿಂದ ನಡೆಯಲ್ಪಡುವ ದೇಶದ ಮೊತ್ತ ಮೊದಲ ಐಟಿ ಕಂಪನಿಯನ್ನು ಸ್ಥಾಪಿಸುವ ಸಲುವಾಗಿಯೇ ಅಮಿತಾಭ್ ಸೋನಿ ಯುಕೆಯ ಸರ್ಕಾರಿ ಉದ್ಯೋಗವನ್ನು ತೊರೆದು ಭಾರತಕ್ಕೆ ಆಗಮಿಸಿದ್ದರು. ತಮ್ಮದೇ ಆದ ಅಬೇಧ್ಯ ಎನ್ಜಿಓವನ್ನು ಸ್ಥಾಪಿಸಿ ಅದರ ಮೂಲಕ ಬುಡಕಟ್ಟು ಸಮುದಾಯದವರಿಗಾಗಿ ‘ವಿಲೇಜ್ ಕ್ವೆಸ್ಟ್’ ಐಟಿ ಕಾರ್ಯಕ್ರಮ ಆರಂಭಿಸಿದರು.
ಬುಡಕಟ್ಟು ಜನರ ವಲಸೆಯನ್ನು ತಪ್ಪಿಸಬೇಕು, ಮಹಿಳೆಯರನ್ನು ಸಬಲೀಕರಣಗೊಳಿಸಬೇಕು ಮತ್ತು ಅವರಿಗೆ ಉದ್ಯೋಗವನ್ನು ನೀಡಬೇಕು ಎಂಬ ಉದ್ದೇಶದಿಂದ ಮಧ್ಯಪ್ರದೇಶದ ಭೋಪಾಲದಿಂದ 25 ಕಿಲೋ ಮೀಟರ್ ದೂರದಲ್ಲಿರುವ ಕೆಕಡಿಯ ಎಂಬ ಬುಡಕಟ್ಟು ಗ್ರಾಮದಲ್ಲಿ ಅಮಿತಾಭ್ ತಮ್ಮ ಕಾರ್ಯವನ್ನು ಆರಂಭಿಸಿದರು.
ಅವರ ಅಬೇಧ್ಯ ಸಂಸ್ಥೆ ಶಿಕ್ಷಕರನ್ನು, ಬುಡಕಟ್ಟು ಯುವಕರನ್ನು ಹೊಂದಿದ ತಂಡ ಕಟ್ಟಿಕೊಂಡು ಕೆಕಡಿಯಾ ಮತ್ತು ಅದರ ಸುತ್ತಮುತ್ತಲ ಗ್ರಾಮದಲ್ಲಿ ಸೇವೆ ಆರಂಭಿಸಿತು. ಶಿಕ್ಷಣ, ಉದ್ಯೋಗ, ಜೀವನೋಪಾಯ, ಜಲ ನಿರ್ವಹಣೆ, ಆಡಳಿತ ಸುಧಾರಣೆಯ ಗುರಿ ಇಟ್ಟುಕೊಂಡು ಇದು ನಿರಂತರ ಸೇವೆಯನ್ನು ನಡೆಸಿತು.
ಶಿಕ್ಷಣ ಹೊಂದಿದ ಬುಡಕಟ್ಟು ಜನ ವಲಸೆ ಹೋಗುವುದನ್ನು ತಪ್ಪಿಸಲು ವರ್ಷಗಳ ಹಿಂದೆಯಷ್ಟೇ ಅಬೇಧ್ಯ ಸಂಸ್ಥೆ ವಿಲೇಜ್ ಕ್ವಿಸ್ಟ್ ಎಂಬ ಐಟಿ ಕಂಪನಿಯನ್ನು ಸ್ಥಾಪನೆ ಮಾಡಿದೆ. ಗ್ರಾಮದ ಯುವಕರೇ ಇದರ ಮಾಲಿಕರು. ಐವರು ಇದರ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದಾರೆ.
ಸೆಕೆಂಡ್ ಹ್ಯಾಂಡ್ ಕಂಪ್ಯೂಟರ್, ಹೂಡಿಕೆಯಿಂದ ಪೀಠೋಪಕರಣವನ್ನು ಖರೀದಿಸಿ ಇದೀಗ ‘ವಿಲೇಝ್ ಕ್ವೆಸ್ಟ್’ ಒಂದು ವೃತ್ತಿಪರ ಐಟಿ ಕಂಪನಿಯಂತೆ ಕಾಣುತ್ತದೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಂದ ಇಲ್ಲಿನ ಯುವಕರಿಗೆ ತರಬೇತಿಯನ್ನು ನೀಡಿ ಡಾಟಾ ಎಂಟ್ರಿಗಳನ್ನು ಕಲಿಸಲಾಗಿದೆ.
ಬುಡಕಟ್ಟು ಗ್ರಾಮವನ್ನು ಸುಧಾರಿಸಬೇಕು ಎಂಬ ಉದ್ದೇಶದಿಂದ ಅತ್ಯುನ್ನತ ಉದ್ಯೋಗವನ್ನು ತೊರೆದು ಭಾರತಕ್ಕೆ ಆಗಮಿಸಿ ಬದಲಾವಣೆ ತರುತ್ತಿರುವ ಅಮಿತಾಭ್ ಸೋನಿ ಅವರ ಕಾರ್ಯ ನಿಜಕ್ಕೂ ಪ್ರಶಂಸನೀಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.