ಪುತ್ರ ಶೋಕಂ ನಿರಂತರಂ ಎಂಬ ಮಾತಿದೆ. ಅಗಲಿದ ಮಕ್ಕಳ ನೆನಪು ಹೆತ್ತವರನ್ನು ಜೀವನದ ಕೊನೆ ತನಕವೂ ಬಾಧಿಸುತ್ತದೆ. ಹೆತ್ತು, ಹೊತ್ತು, ಮುದ್ದಾಡಿ ಬೆಳೆಸಿದ ಮಗ/ಮಗಳು ಇಂದು ನನ್ನೊಂದಿಗಿಲ್ಲ ಎಂಬ ವೇದನೆಗೆ ಮಿಗಿಲಾದ ನೋವು ಜಗತ್ತಿನಲ್ಲಿ ಮತ್ತೊಂದು ಇರಲಾರದು.
ಮುಂಬಯಿಯ ದಯಂತಿ ತನ್ನಾ ಕೂಡ ಪುತ್ರನ ಅಗಲುವಿಕೆಯ ನೋವಿನಿಂದ ಜರ್ಜರಿತರಾಗಿದ್ದವರು. ಅದೇಗೋ ಖಿನ್ನತೆಯಿಂದ ಹೊರ ಬಂದಿರುವ ಅವರು ಇಂದು ಹಸಿದ ಹೊಟ್ಟೆಗಳಿಗೆ ಅನ್ನ ಕೊಡುವ ಮೂಲಕ ಜೀವನದಲ್ಲಿ ಸಂತೋಷ, ಸಂತೃಪ್ತಿಯನ್ನು ಕಂಡುಕೊಳ್ಳುತ್ತಿದ್ದಾರೆ.
6 ವರ್ಷಗಳ ಹಿಂದೆ 22 ವರ್ಷದ ಮಗ ನಿಮಿಷ್ ರೈಲು ಅಪಘಾತದಲ್ಲಿ ತೀರಿ ಹೋದಾಗ ದಮಂತಿ ಅವರ ಜೀವನಕ್ಕೆಯೇ ಕತ್ತಲು ಆವರಿಸಿತ್ತು. ಮುಂದೆ ತನಗೆ ಬದುಕೇ ಇಲ್ಲ ಎಂಬ ರೀತಿ ಅವರು ಕುಸಿದು ಹೋಗಿದ್ದರು. ಖಿನ್ನತೆಯಿಂದ ಸುಧಾರಿಸಿಕೊಂಡ ಬಳಿಕ ಮಗನ ಅಗಲುವಿಕೆಯ ನೋವನ್ನು ಮರೆಯಲು ಪತಿ ಪ್ರದೀಪ್ರೊಂದಿಗೆ ತೀರ್ಥ ಯಾತ್ರೆ, ಪ್ರವಾಸಕ್ಕೆ ತೆರಳುತ್ತಿದ್ದರು.
ನಿಮಿಷ್ ಆತನ ಹುಟ್ಟುಹಬ್ಬದ ದಿನ ಸಿದ್ದಿವಿನಾಯಕ ದೇಗುಲಕ್ಕೆ ಹೋಗುತ್ತಿದ್ದ ಮತ್ತು ಕಾರ್ಮಿಕರ ಮಕ್ಕಳಿಗೆ ತಿಂಡಿ ಹಂಚುತ್ತಿದ್ದ. ಆತನ ಗೌರವಾರ್ಥವಾಗಿ ಈ ಕಾರ್ಯವನ್ನು ಮುಂದುವರೆಸಲು ದಂಪತಿಗಳು ನಿರ್ಧರಿಸಿದರು. ನಿಮಿಷ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಅದರ ಮೂಲಕ ಬಡ, ದೀನ, ವಿಕಲಾಂಗ, ಅನಾಥರಿಗೆ ಪ್ರತಿನಿತ್ಯ ಆಹಾರವನ್ನು ನೀಡಲು ಮುಂದಾದರು. ಸ್ನೇಹಿತರ, ನೆರೆಹೊರೆಯವರ ಸಹಾಯವೂ ದೊರೆಯಿತು.
ಇಂದು ನಿಮಿಷ್ ಚಾರಿಟೇಬಲ್ ಟ್ರಸ್ಟ್ ಬರೋಬ್ಬರಿ 100 ಜನರಿಗೆ ಪ್ರತಿನಿತ್ಯ ಆಹಾರಗಳನ್ನು ಪೂರೈಕೆ ಮಾಡುತ್ತಿದೆ. ನೋಂದಣಿ ಮಾಡಿಸಿಕೊಂಡು ಅವರಿಗೆ ಆಹಾರ ನೀಡುತ್ತಿದೆ. ಸಮಯಕ್ಕೆ ಸರಿಯಾಗಿ ಅಗತ್ಯವಿರುವವರಿಗೆ ಆಹಾರ ಪೂರೈಕೆಯಾಗುವಂತೆ ತನ್ನಾ ದಂಪತಿ ನೋಡಿಕೊಳ್ಳುತ್ತಿದ್ದಾರೆ.
ಅಗಲಿದೆ ಮಗನನ್ನು ತಮ್ಮ ಕಾರ್ಯದ ಮೂಲಕ ಜೀವಂತವಿರಿಸಿದ ದಂಪತಿಗೆ ನಮ್ಮ ಸಲಾಂ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.