ನವದೆಹಲಿ: ರೈಲ್ವೇ ಮಂಡಳಿಯ ಮುಖ್ಯಸ್ಥರುಗಳು ಮತ್ತು ಇತರ ಸದಸ್ಯರುಗಳು ಆಗಮಿಸುವ ಮತ್ತು ನಿರ್ಗಮಿಸುವ ವೇಳೆ ರೈಲ್ವೇ ಜನರಲ್ ಮ್ಯಾನೇಜರ್ ಅವರ ಮುಂದೆ ಹಾಜರಿರಬೇಕು ಎಂಬ 36 ವರ್ಷ ಹಳೆಯ ಶಿಷ್ಟಾಚಾರವನ್ನು ಇದೀಗ ರೈಲ್ವೇ ಮಂಡಳಿ ತೆಗೆದು ಹಾಕಲಾಗಿದೆ.
ರೈಲ್ವೇಯಲ್ಲಿನ ವಿಐಪಿ ಸಂಸ್ಕೃತಿಯನ್ನು ತೊಡೆದು ಹಾಕಲು ರೈಲ್ವೇ ಮಂಡಳಿ ಮುಖ್ಯಸ್ಥ ಅಶ್ವನಿ ಲೊಹಾನಿಯವರು ಕೈಗೊಂಡ ಅತೀ ಮಹತ್ವದ ನಿರ್ಧಾರ ಇದಾಗಿದೆ. ಈಗಾಗಲೇ ಅವರು ರೈಲ್ವೇಯ ಕೆಳ ದರ್ಜೆ ನೌಕರರು ರೈಲ್ವೇ ಅಧಿಕಾರಿಗಳ ಮನೆಗೆಲಸ ಮಾಡುವುದಕ್ಕೆ ಬ್ರೇಕ್ ಹಾಕಿದ್ದಾರೆ.
ಈಗಾಗಲೇ ಏರ್ಪೋರ್ಟ್ ಮತ್ತು ರೈಲ್ವೇ ಸ್ಟೇಶನ್ಗಳಿಗೆ ನಿರ್ದೇಶನ ಮತ್ತು ನಿಯಮಗಳನ್ನು ಕಳುಹಿಸಿಕೊಡಲಾಗಿದ್ದು, ಇದರಲ್ಲಿ ಜನರಲ್ ಮ್ಯಾನೇಜರ್ ಮುಖ್ಯಸ್ಥರುಗಳ ಆಗಮನ ಮತ್ತು ನಿಗರ್ಮನದ ವೇಳೆ ಹಾಜರಿರಬೇಕು ಎಂಬ ಶಿಷ್ಟಾಚಾರವನ್ನು ತೆಗೆದು ಹಾಕುವಂತೆ ಸೂಚಿಸಲಾಗಿದೆ.