ದ್ವಾರಕಾ: ಜಿಎಸ್ಟಿಯಲ್ಲಿ ಬದಲಾವಣೆಗಳನ್ನು ತಂದ ಹಿನ್ನಲೆಯಲ್ಲಿ ದೀಪಾವಳಿ ನಿಗದಿಗಿಂತ ಮುಂಚಿತವಾಗಿಯೇ ಆಗಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತಿನ ದ್ವಾರಕಾದಲ್ಲಿ ಮಾತನಾಡಿದ ಅವರು, ‘ಜಿಎಸ್ಟಿ ಜಾರಿಗೆ ಬಂದ ಸಂದರ್ಭದಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇವೆ. 3 ತಿಂಗಳೊಳಗೆ ಜಿಎಸ್ಟಿ ಸಂಬಂಧಿಸಿದ ಎಲ್ಲಾ ಆಯಾಮಗಳನ್ನು ಅಧ್ಯಯನ ನಡೆಸುತ್ತೇವೆ ಎಂದಿದ್ದೆವು’ ಎಂದಿದ್ದಾರೆ.
ಜನರ ಹಿತಾಸಕ್ತಿ ಮತ್ತು ಆರ್ಥಿಕ ಪ್ರಗತಿಯತ್ತ ನಾವು ಗಮನವಹಿಸುತ್ತೇವೆ ಎಂಬುದಕ್ಕೆ ಜಿಎಸ್ಟಿಯಲ್ಲಿ ತಂದ ಬದಲಾವಣೆಯೇ ಸಾಕ್ಷಿ ಎಂದಿದ್ದಾರೆ.