ತಿರುವನಂತಪುರಂ: ಕೇರಳದಲ್ಲಿ ದುಷ್ಕರ್ಮಿಗಳಿಂದ ಕೊಲೆಯಾದ ಎಸ್.ಎಲ್. ರಾಜೇಶ್ ಅವರ ಕುಟುಂಬಸ್ಥರಿಗೆ ಆರ್ಎಸ್ಎಸ್ ವತಿಯಿಂದ 26 ಲಕ್ಷ ರೂಪಾಯಿಗಳ ಧನ ಸಹಾಯವನ್ನು ನೀಡಲಾಯಿತು.
ಆರ್ಎಸ್ಎಸ್ನ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಗುರುವಾರ ಶ್ರೀಕರಿಯಂನಲ್ಲಿನ ರಾಜೇಶ್ ಅವರ ಮನೆಗೆ ತೆರಳಿ ಹಣವನ್ನು ನೀಡಿದರು. ಈ ಹಣವನ್ನು ಕೇರಳದಾದ್ಯಂತ ಸಂಘ ಪರಿವಾರದವರು ಅನುದಾನದ ಮೂಲಕ ಸಂಗ್ರಹಿಸಿದ್ದಾರೆ. ತಿರುವನಂತಪುರಂನಲ್ಲಿನ ಸಂಘದ ಕಾರ್ಯಕರ್ತರಿಂದ ಅತೀ ಹೆಚ್ಚು ಹಣ ಸಂಗ್ರಹವಾಗಿದೆ.
‘ದಶಕಗಳ ಹಿಂದೆ ನಾನು ಎಬಿವಿಪಿಯಲ್ಲಿ ಇದ್ದಾಗಲೂ ಸಿಪಿಎಂ ನಾಯಕರಿಗೆ ಹಿಂಸಾಚಾರವನ್ನು ಬಿಟ್ಟು ಮಾತುಕತೆ ನಡೆಸಲು ಹೇಳಿದ್ದೆ. ಆದರೆ ಸಿಪಿಎಂ ಇದನ್ನು ಎಂದೂ ಗಂಭೀರವಾಗಿ ಪರಿಗಣಿಸಲಿಲ್ಲ. ರಾಜೇಶ್ ಹತ್ಯೆ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಭವಿಷ್ಯದಲ್ಲೂ ರಾಜೇಶ್ ಕುಟುಂಬದ ಅಗತ್ಯತೆಗಳ ಬಗ್ಗೆ ಆರ್ಎಸ್ಎಸ್ ಗಮನ ನೀಡಲಿದೆ’ ಎಂದು ಹೊಸಬಾಳೆ ಅವರು ಭರವಸೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.