ನವದೆಹಲಿ: ರಾಮಾಯಣವನ್ನು ರಚಿಸಿದ ಆದಿ ಕವಿ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಇಂದು ದೇಶದಾದ್ಯಂತ ಆಚರಿಸಲಾಗುತ್ತಿದೆ.
ಟ್ವಿಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ವಾಲ್ಮೀಕಿ ಒರ್ವ ಶ್ರೇಷ್ಠ ಸಂತ ಹಾಗೂ ಸಾಹಿತ್ಯ ಪಂಡಿತರಾಗಿದ್ದಾರೆ. ಅವರ ಶ್ರೀಮಂತ ಚಿಂತನೆ ಮತ್ತು ಕಾರ್ಯ ಮುಂಬರುವ ಪೀಳಿಗೆಗಳಿಗೂ ಪ್ರೇರಣಾದಾಯಕ’ ಎಂದಿದ್ದಾರೆ.
ವೃತ್ತಿಯಲ್ಲಿ ದರೊಡೆಕೋರನಾಗಿದ್ದರೂ ನಾರದ ಮಹರ್ಷಿಗಳ ಉಪದೇಶದಿಂದ ಜ್ಞಾನೊದಯವಾಗಿ ವಿಶ್ವದ ಅಮರ ಮಹಾಕಾವ್ಯ ರಾಮಾಯಣವನ್ನು ಆದಿ ಕವಿ ವಾಲ್ಮೀಕಿ ರಚಿಸಿದರು.
ಹುಟ್ಟಿನಿಂದ ಜಗತ್ತಿನಲ್ಲಿ ಯಾರು ಒಳ್ಳೆಯವರು ಮತ್ತು ಕೆಟ್ಟವರು ಎಂದು ಅಳೆಯಲಾಗುವುದಿಲ್ಲ. ಜೀವನದಲ್ಲಿ ಅವರು ಮಾಡಿದ ಕೆಲಸ ಕಾರ್ಯಗಳು ಅವರ ಹಿರಿಮೆಯನ್ನು ನಿರ್ಧರಿಸುತ್ತದೆ ಎಂಬ ಸಂದೇಶ ವಾಲ್ಮೀಕಿಯವರ ಜೀವನ ಚರಿತ್ರೆ ನಮಗೆ ತಿಳಿಸುತ್ತದೆ.