ಕಣ್ಣೂರು: ಕೇರಳದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ನೇತೃತ್ವದಲ್ಲಿ ನಡೆಸಲಾಗುತ್ತಿರುವ ‘ಜನ ರಕ್ಷಾ ಯಾತ್ರೆ’ಯಲ್ಲಿ ಬುಧವಾರ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಅವರು ಪಾಲ್ಗೊಂಡಿದ್ದಾರೆ.
ಈ ವೇಳೆ ಮಾತನಾಡಿದ ಅವರು, ಪಿನರಾಯಿ ವಿಜಯನ್ ನೇತೃತ್ವದ ಸರ್ಕಾರದ ಆಡಳಿತದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದೆ. ಜಿಹಾದಿ ಭಯೋತ್ಪಾದನೆಯ ವಾತಾವರಣ ವೃದ್ಧಿಸುತ್ತಿದೆ ಎಂದರು ಆರೋಪಿಸಿದರು.
ಪ್ರಜಾಪ್ರಭುತ್ವದ ಬಗ್ಗೆ ಮಾತುನಾಡುವ ಆದರೆ ವಾಸ್ತವದಲ್ಲಿ ಹಿಂಸಾಚಾರವನ್ನು ಉತ್ತೇಜಿಸುವ ಪಶ್ಚಿಮ ಬಂಗಾಳದ ಸಿಪಿಎಂ, ಕೇರಳ ಮತ್ತು ತ್ರಿಪುರ ಸರ್ಕಾರಗಳಿಗೆ ಬಿಜೆಪಿಯ ಜನ ರಕ್ಷಾ ಯಾತ್ರೆ ಕನ್ನಡಿ ಹಿಡಿಯುತ್ತದೆ ಎಂದರು.
ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ, ಆದರೆ ಕೇರಳದಲ್ಲಿ ರಾಜಕೀಯ ಕೊಲೆಗಳು ನಡೆಯುತ್ತಿದೆ, ಆರ್ಎಸ್ಎಸ್ನವರ ಕೊಲೆಯ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ ಎಂದರು.