ಕುಂಬ್ಡಾಜೆ : ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರವು ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಲಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ನ್ಯಾಯವಾದಿ ಕೆ.ಶ್ರೀಕಾಂತ್ ಹೇಳಿದ್ದಾರೆ. ಅವರು ಬಿಜೆಪಿ ಕುಂಬ್ಡಾಜೆ ಪಂಚಾಯತು ಸಮಿತಿಯ ಆಶ್ರಯದಲ್ಲಿ ನಡೆದ ನರೇಂದ್ರ ಮೋದಿ ಸರಕಾರದ ಪ್ರಥಮ ವರ್ಷಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕೇಂದ್ರ ಸರಕಾರವು ಹಲವು ಜನೋಪಯೋಗಿ ಯೋಜನೆಗಳನ್ನು ಜ್ಯಾರಿಗೊಳಿಸಿದೆ. ಸ್ವಚ್ಚ ಭಾರತ್, ಸುಕನ್ಯಾ ಸಮೃದ್ದಿ ಯೋಜನ. ವಿವಿದ ವಿಮಾ ಯೋಜನೆಗಳು ಇಂದು ಜಗತ್ತಿನಲ್ಲಿಯೇ ಮನೆ ಮಾತಾಗಿದೆ. ರೂ.12, 330 ಗಳಿಗೆ ಲಭಿಸುವ ವಿಮಾ ಸವಲತ್ತುಗಳಿಗೆ ಇಂದು ಜನರು ಮುಗಿದು ಬೀಳುತ್ತಿದ್ದಾರೆ. ಅದನ್ನು ಪ್ರಚುರ ಪಡಿಸಲು ಕಾರ್ಯಕರ್ತರು ಮುಂದಾಗಬೇಕೆಂದು ಅವರು ಕಎ ನೀಡಿದರು.
ಹರೀಶ ಕುಣಿಕುಳ್ಳಾಯ ಅಧ್ಯಕ್ಷತೆ ವಹಿಸಿದರು. ಹಿರಿಯ ಮುಕಂಡರುಗಳಾದ ಸುಧಾಮ ಗೋಸಾಡ, ಶೈಲಜ ಭಟ್, ಚಂದ್ರಶೇಕರನ್, ಶಾಂತಕುಮಾರಿ, ರಾಜೇಶ್ ಶೆಟ್ಟಿ, ಕಮಲಾಕ್ಷಿ ಮೊದಲಾದವರು ಮಾತನಾಡಿದರು. ರವೀಂದ್ರ ರೈ ಸ್ವಾಗತಿಸಿ ಯಶೋದಾ ವಂದಿಸಿದರು. ಅನಂತರ ಸುಕನ್ಯಾ ಸಮೃದ್ದಿ ಯೋಜನ, ವಿಮಾ ಯೋಜನಗಳು ಎಂಬಿವುಗಳ ಬಗ್ಗೆ ಅಧಿಕಾರಿಗಳಿಂದ ತಿಳುವಳಿಕಾ ತರಗತಿ ನಡೆಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.