ನವದೆಹಲಿ: ವರ್ಲ್ಡ್ ಎಕನಾಮಿಕ್ ಫೋರಂನ(WEF ) 2017-18ರ ಸಾಲಿನ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಾಂಕದಲ್ಲಿ ಭಾರತಕ್ಕೆ 40ನೇ ಸ್ಥಾನ ದೊರೆತಿದೆ. ಬ್ರಿಕ್ ರಾಷ್ಟ್ರಗಳ ಪೈಕಿ ಭಾರತ 3ನೇ ಸ್ಥಾನವನ್ನು ಪಡೆದುಕೊಂಡಿದೆ.
ಗ್ಲೋಬಲ್ ಕಾಂಪಿಟಿಟಿವ್ ಇಂಡೆಕ್ಸ್ನಲ್ಲಿನ ಒಟ್ಟು 137 ರಾಷ್ಟ್ರಗಳ ಪೈಕಿ ಭಾರತದ 40ನೇ ಸ್ಥಾನ ಪಡೆದಿದೆ ಎಂದು ವರ್ಲ್ಡ್ ಎಕನಾಮಿಕ್ ಫೋರಂ ಘೋಷಣೆ ಮಾಡಿದೆ.
ಸ್ವಿಟ್ಜರ್ಲ್ಯಾಂಡ್, ಅಮೆರಿಕಾ, ಸಿಂಗಾಪುರು ಈ ಬಾರಿಯೂ ಟಾಪ್ 3 ಸ್ಥಾನವನ್ನು ಪಡೆದುಕೊಂಡಿವೆ, ಚೀನಾ 27ನೇ ಸ್ಥಾನ, ರಷ್ಯಾ 38ನೇ ಸ್ಥಾನ ಪಡೆದುಕೊಂಡಿದೆ.
ಭಾರತದ ದಕ್ಷಿಣ ಏಷ್ಯಾದಲ್ಲಿ ಅತ್ಯುನ್ನತ ಆರ್ಥಿಕತೆಯನ್ನು ಹೊಂದಿದೆ, ಮೂಲಸೌಕರ್ಯ, ಶೀಕ್ಷಣ ಮತ್ತು ಕಾರ್ಮಿಕ ಮಾರುಕಟ್ಟೆ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಸುಧಾರಿಸಿದೆ ಎಂದು ವರ್ಲ್ಡ್ ಎಕನಾಮಿಕ್ ಫೋರಂ ಅಭಿಪ್ರಾಯಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.