ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಬಳಿಯ ಕೋಟೆಕಲ್ ಹತ್ತಿರದ ಗುಡ್ಡದಲ್ಲಿ ಮೈದುಂಬಿ ಹರಿಯುತ್ತಿರುವ ದಿಡಗ
ಕಳೆದೊಂದು ವಾರದಿಂದ ದಟ್ಟವಾದ ಮೋಡ ಮುಸುಕಿದ ವಾತಾವರಣದಲ್ಲೇ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ವರುಣನ ಅಬ್ಬರ ಜೋರಾಗಿದೆ. ವಾರಗಟ್ಟಲೇ ದಟ್ಟವಾದ ಮೋಡ, ರಭಸದ ಮಳೆಯನ್ನೇ ಕಾಣದ ಜನತೆಗೆ ಸದ್ಯ ಉಂಟಾಗಿರುವ ವಾತಾವರಣ ಉಲ್ಲಸಿತರನ್ನಾಗಿಸಿದೆ.
ಮಳೆಯ ಅಬ್ಬರದಿಂದಾಗಿ ಕೆರೆ ಕಟ್ಟೆಗಳು ತುಂಬಿಕೊಂಡಿವೆ. ಹಳ್ಳ. ಕೊಳ್ಳಗಳು ಹರಿಯುತ್ತಿವೆ. ಎಲ್ಲಿ ನೋಡಿದಲ್ಲಿ ಹೊಲಗಳಲ್ಲಿ ನೀರು ನಿಂತುಕೊಂಡಿರುವ ದೃಶ್ಯಗಳು ಕಾಣಿಸುತ್ತಿವೆ.
ಉತ್ತಮ ಮಳೆಯಿಂದಾಗಿ ಬತ್ತಿ ಬರಿದಾಗಿ ಬಿಕೋ ಎನ್ನುತ್ತಿದ್ದ ದಿಡಗಗಳು ಮೈತುಂಬಿಕೊಂಡಿವೆ. ಜಿಲ್ಲೆಯ ಸಿದ್ದನಕೊಳ್ಳ, ಹುಲಿಗೆಮ್ಮನ ಕೊಳ್ಳದಲ್ಲೂ ನೀರು ಹರಿಯುತ್ತಿದೆ. ಹಾಗೇ ಬಾಗಲಕೋಟೆ ಸಮೀಪದಲ್ಲಿರುವ ಗುಳೇದಗಡ್ಡ ಹತ್ತಿರದಲ್ಲಿನ ಕೋಟೆಕಲ್ನ ದಿಡಗ ಜನಾಕರ್ಷಣೆ ತಾಣವಾಗಿ ಮಾರ್ಪಟ್ಟಿದೆ.
ಕೋಟೆಕಲ್ನಿಂದ ಎರಡು ಕೀಮಿ ದೂರ ಗುಡ್ಡದಲ್ಲಿ ನಡೆದುಕೊಂಡು ಹೋಗುತ್ತಿದ್ದಂತೆ ಅಲ್ಲಿ ಬೀಳುತ್ತಿರುವ ಜಲಪಾತ ಎಂಥವರ ಮನಸ್ಸನ್ನೂ ರೋಮಾಂಚನಗೊಳಿಸುತ್ತದೆ. ಗುಡ್ಡದಲ್ಲಿ ನಡೆದುಕೊಂಡು ಜಲಪಾತ ಸ್ಥಳಕ್ಕೆ ಹೋಗುವುದೇ ರೋಚಕವೆನಿಸುತ್ತದೆ. ಜಲಪಾತಕ್ಕೆ ನಡೆದುಕೊಂಡೇ ಹೋಗಬೇಕು. ವಾಹನಗಳಲ್ಲಿ ಹೋಗಲು ಸಾಧ್ಯವಿಲ್ಲ.
ಬಾಗಲಕೋಟೆಯಿಂದ ಕೋಟೆಕಲ್ಗೆ ಕೆಲವಡಿ ಮಾರ್ಗವಾಗಿ ಹೋಗಬಹುದು. ಬಾದಾಮಿಯಿಂದ, ಶಿರೂರನಿಂದ, ಕಟಗೇರಿ ಮಾರ್ಗದಿಂದಲೂ ಹೋಗಬಹುದು. ಕೋಟೆಕಲ್ಗೆ ಇಳಿದು ಜಲಪಾತಕ್ಕೆ ಹೋಗಬಹುದು. ಇಲ್ಲವೆ ವಸ್ತ್ರದ ಕಾಲೇಜ್ನಿಂದಲೂ ಹೊಲದ ಮಾರ್ಗದ ಮೂಲಕ ದಿಡಗಕ್ಕೆ ಹೋಗಲು ಅನುಕೂಲವಿದೆ.
ನಿತ್ಯ ನೂರಾರು ಜನ ದಿಗಡಕ್ಕೆ ಆಗಮಿಸುತ್ತಿರುವ ಪರಿಣಾಮವಾಗಿ ಅದೊಂದು ಪಿಕ್ನಿಕ್ ತಾಣವಾಗಿ ಮಾರ್ಪಟ್ಟಿದೆ.
ಜಿಲ್ಲಾಡಳಿತ ಜಿಲ್ಲೆಯಲ್ಲಿನ ಇಂಥ ತಾಣಗಳಿಗೆ ರಸ್ತೆ ಸ್ಭೆರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದಲ್ಲಿ ಅವುಗಳು ವಿಕೇಂಡ್ ತಾಣಗಳಾಗಿ ಮಾರ್ಪಡಲಿವೆ. ಜಿಲ್ಲಾಡಳಿತ ಈ ಬಗೆ ಗಮನ ಹರಿಸುವುದೇ ಎನ್ನುವುದನ್ನು ಕಾಯ್ದು ನೋಡಬೇಕಷ್ಟೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.