ಮಂಗಳೂರು : 69 ವರ್ಷ ಕಾಲ ದೇಶವನ್ನು ಕಾಂಗ್ರೆಸ್ ಆಳುತ್ತಿದ್ದಾಗ ನೆರೆಕರೆಯ ದೇಶಗಳಲ್ಲಿ ಗಡಿ ತಂಟೆ ಉಂಟಾದಾಗ ಭಾರತ ವಿಶ್ವ ಸಂಸ್ಥೆಗೆ ದೂರು ಕೊಡುತ್ತಿತ್ತು. ಮೋದಿಯವರು ದೇಶದ ಪ್ರಧಾನಿಯಾದ ನಂತರ ಗಡಿ ತಂಟೆಗಳು ಉಂಟಾದಾಗ ಅದನ್ನು ಸಮರ್ಪಕವಾಗಿ ಎದುರಿಸಿದ ಪರಿಣಾಮ ನೆರೆಕರೆಯ ದೇಶಗಳು ವಿಶ್ವಸಂಸ್ಥೆಗೆ ಮೊರೆ ಹೋಗುತ್ತಿವೆ.
ಕರ್ನಾಟಕದಲ್ಲಿ ಆಹಾರ ಪಡಿತರ ವ್ಯವಸ್ಥೆಗೋಸ್ಕರ ಕೇಂದ್ರ ಸರಕಾರ ರಾಜ್ಯಕ್ಕೆ ವರ್ಷವೊಂದರ 2.24 ಲಕ್ಷ ಟನ್ ಅಕ್ಕಿ ಮತ್ತು 1.6 ಲಕ್ಷ ಟನ್ ಗೋಧಿ ಒದಗಿಸುತ್ತದೆ. ಇವೆಲ್ಲವನ್ನೂ ಕೇಂದ್ರ ಸರಕಾರ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿಗೆ ಕೆ.ಜಿ. ಒಂದರಂತೆ ರೂ.28 ರಂತೆ ಖರೀದಿಸಿ, ರೂ. 3 ರಂತೆ ಮತ್ತು ಗೋಧಿ ಕೆ.ಜಿ. ಒಂದಕ್ಕೆ ರೂ. 24ಕ್ಕೆ ಖರೀದಿಸಿ, ಕೆ.ಜಿ.ಒಂದರ 2 ರೂ.ಗಳಂತೆ ಕರ್ನಾಟಕಕ್ಕೆ ಒದಗಿಸುತ್ತದೆ. ಅಂದರೆ ಕೇಂದ್ರ ಸರಕಾರ ಅಕ್ಕಿಯಲ್ಲಿ ಕೆ.ಜಿ.ಒಂದರ 25 ರೂ.ನಂತೆ ಗೋಧಿ ಕೆ.ಜಿ. ಒಂದರ 22 ರೂ.ಗಳಂತೆ ಸಹಾಯಧನ ಒದಗಿಸುತ್ತದೆ.
ಇದನ್ನು ರಾಜ್ಯ ಸರಕಾರ ಪಡಿತರ ಚೀಟಿಯ ಆಧಾರದಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಧರ್ಮಾರ್ಥ ಒದಗಿಸಿ, ಎಪಿಎಲ್ ಕಾರ್ಡುದಾರರಿಗೆ ಹೆಚ್ಚಿನ ದರವನ್ನು ವಸೂಲು ಮಾಡುತ್ತಿದೆ. ಶ್ರೀಸಾಮಾನ್ಯನಿಗೆ ರಾಜ್ಯ ಸರಕಾರಕ್ಕಿಂತ ಕೇಂದ್ರಸರಕಾರ ಹೆಚ್ಚಿನ ಸಬ್ಸಿಡಿ ಹಣವನ್ನು ಒದಗಿಸುತ್ತಿದೆ. ಈ ವಿಷಯದಲ್ಲಿ ರಾಜ್ಯ ಸರಕಾರ ಕೇವಲ ಪೋಸ್ಟ್ಮ್ಯಾನ್ ಕೆಲಸ ಮಾತ್ರ ಮಾಡುತ್ತಿರುವುದು ಪೂಜಾರಿಯವರಿಗೆ ತಿಳಿದ ವಿಷಯವಾಗಿದೆ.
ಇಡೀ ಜಗತ್ತು ಅಚ್ಚರಿ ಪಡುವ ರೀತಿಯಲ್ಲಿ ಮೋದಿ ಸರಕಾರ ಯಶಸ್ವಿಯಾಗಿ ಆಡಳಿತ ನಿರ್ವಹಿಸುತ್ತಿರುವಾಗ ಕೇಂದ್ರದ ಮಾಜಿ ಸಚಿವ ಜನಾರ್ಧನ ಪೂಜಾರಿಯವರು ಅನಗತ್ಯ ಟೀಕೆ ಮಾಡುತ್ತಿರುವುದು ಅವರಿಗೆ ಶೋಭೆ ತರುವ ವಿಷಯವಲ್ಲ ಎಂದು ಜಿಲ್ಲಾ ವಕ್ತಾರ ಮಾಜಿ ಶಾಸಕ ಕೆ.ಜಯರಾಮ್ ಶೆಟ್ಟಿ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿರುವರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.