ನವದೆಹಲಿ: ಮೊಬೈಲ್ ಫೋನ್ ಬಳಕೆಯಿಂದ ೨೦೧೬ರಲ್ಲಿ ದೇಶದಲ್ಲಿ ಒಟ್ಟು 4,976 ರಸ್ತೆ ಅಪಘಾತಗಳು ಸಂಭವಿಸಿದೆ. ಇದರಿಂದಾಗಿ 2,138 ಮರಣಗಳು ಉಂಟಾಗಿದೆ ಮತ್ತು 4,746 ಜನರಿಗೆ ಗಾಯಗಳಾಗಿವೆ ಎಂಬುದಾಗಿ ನೂತನ ವರದಿಯೊಂದು ತಿಳಿಸಿದೆ.
ಚಾಲಕರು ಚಾಲನೆಯ ವೇಳೆ ಸೆಲ್ ಫೋನ್ ಬಳಕೆಯಿಂದ ಭಾರತದಲ್ಲಿ ಸಂಭವಿಸಿದ ರಸ್ತೆ ಅಪಘಾತ-2016ವರದಿಯಲ್ಲಿ ಈ ಬಗೆಗಿನ ಅಂಕಿಅಂಶಗಳನ್ನು ನೀಡಲಾಗಿದೆ.
ಮೋಟಾರು ವಾಹನ ಕಾಯ್ದೆ ಸಂಸತ್ತಿನಲ್ಲಿ ಅನುಮೋದನೆಗೊಳ್ಳಲು ಬಾಕಿ ಇದೆ. ಇದರ ಅನ್ವಯ ಚಾಲನೆಯ ವೇಳೆ ಮೊಬೈಲ್ ಫೋನ್ ಬಳಸುವವರಿಗೆ 5 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತದೆ.
ವರದಿಯ ಪ್ರಕಾರ ರಾಂಗ್ ಸೈಡ್ ಡ್ರೈವಿಂಗ್ನಿಂದಾಗಿ 17,654 ಅಪಘಾತ ಕಳೆದ ವರ್ಷ ಸಂಭವಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.