ನವದೆಹಲಿ : ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ನಿರ್ವಾಹಕ ಬಿಎಸ್ಎನ್ಎಲ್ ಜಿಯೋಗೆ ಸೆಡ್ಡು ಹೊಡೆಯಲು ಮತ್ತೊಂದು ಆಫರ್ ಘೋಷಿಸಿದೆ. ಹೊಸ ಆಫರ್ ಪ್ಲ್ಯಾನ್ 429 ಆಗಿದ್ದು, ಇದರಲ್ಲಿ ಅನಿಯಮಿತ ಕರೆಗಳು ಮತ್ತು 90 GB ಡಾಟಾ 90 ದಿನಗಳಿಗೆ ನೀಡಲಾಗುತ್ತದೆ.
429 ಪ್ಲ್ಯಾನ್ ಬಿಎಸ್ಎನ್ಎಲ್ನ ಪ್ರೀಪೈಡ್ ಗ್ರಾಹಕರಿಗೆ ಮಾತ್ರ ಲಭ್ಯವಿದ್ದು, ಇದರಲ್ಲಿ 90 ದಿನಗಳವರೆಗೆ ಪ್ರತಿ ದಿನ 1 GB ಡಾಟಾದಂತೆ 90 GB ಡಾಟಾ ಲಭ್ಯವಿರುತ್ತದೆ. ಇನ್ನುಳಿದಂತೆ ಸ್ಥಳೀಯ ಮತ್ತು ಎಸ್ಟಿಡಿ ಕರೆಗಳು ಅನಿಯಮಿತವಾಗಿರುತ್ತದೆ. ಇದು ಪ್ರಸ್ತುತ ಮಾರುಕಟ್ಟೆಯಲ್ಲಿ ಸ್ಪರ್ಧಾತ್ಮಕ ಯೋಜನೆಯಾಗಿದೆ ಎಂದು ಬಿಎಸ್ಎನ್ಎಲ್ನ ಕನ್ಸ್ಯೂಮರ್ ಮೊಬಿಲಿಟಿ ನಿರ್ದೇಶಕರಾದ ಆರ್. ಕೆ. ಮಿತ್ತಲ್ ಅವರು ಹೇಳಿದ್ದಾರೆ. ಈ ಯೋಜನೆಯು ಕೇರಳ ಸರ್ಕಲ್ ಒಂದನ್ನು ಬಿಟ್ಟು ಉಳಿದೆಲ್ಲೆಡೆ ಲಭ್ಯವಿರಲಿದೆ ಎಂದಿದ್ದಾರೆ.
ಈ 429 ಪ್ಲ್ಯಾನ್ ಜಿಯೋದ 999 ರೂ. ಪ್ಲ್ಯಾನ್ಗೆ ಸೆಡ್ಡು ಹೊಡೆಯಲು ಪ್ರಾರಂಭಿಸಿದಂತಿದೆ.
ಈ ಮೊದಲು ಎರ್ಟೆಲ್ನ399 ಮತ್ತು ಜಿಯೋದ 349 ಪ್ಲ್ಯಾನ್ಗೆ ಸೆಡ್ಡು ಹೊಡೆಯಲು ಬಿಎಸ್ಎನ್ಎಲ್ 298 ಪ್ಲ್ಯಾನ್ ಬಿಡುಗಡೆಗೊಳಿಸಿತ್ತು. ಇದು ಕೇವಲ 56 ದಿನಗಳ ಅವಧಿಯನ್ನು ಹೊಂದಿತ್ತು.
ಪ್ರೀಪೇಯ್ಡ್ ಗ್ರಾಹಕರು ಬಿಎಸ್ಎನ್ಎಲ್ ವೆಬ್ಸೈಟ್ಗೆ ಭೇಟಿ ನೀಡಿ ರೂ. 429 ಪ್ಲ್ಯಾನ್ ಆ್ಯಕ್ಟಿವೇಟ್ ಮಾಡಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.