ನವದೆಹಲಿ: ಸಾಮಾಜಿಕ ಜಾಲತಾಣ ಟ್ವಿಟರ್ ಹೇಳಿಕೊಂಡಿರುವ ಪ್ರಕಾರ, ಭಾನುವಾರದ ಕೇಂದ್ರ ಸಚಿವ ಸಂಪುಟ ವಿಸ್ತರಣೆ/ ಪುನರ್ರಚನೆಯ ಸಮಯದಲ್ಲಿ ಟ್ವಿಟರ್ ನಲ್ಲಿ ಸುಮಾರು 4,00,000 ಸಂಭಾಷಣೆಗಳು ದಾಖಲಾಗಿವೆ.
ಜನರು ತಮ್ಮ ಅಭಿಪ್ರಾಯ ತಿಳಿಸಲು, ಪ್ರತಿಕ್ರಿಯಿಸಲು, ಹಾರೈಕೆಗಳನ್ನು ಸಲ್ಲಿಸಲು ಬಳಸಿದ ಜನಪ್ರಿಯ ಹ್ಯಾಷ್ ಟ್ಯಾಗ್ ಗಳೆಂದರೆ #cabinetreshuffle, #TeamModi, #Modi2019Cabinet ಮತ್ತು #Ministry4NewIndia.
ಟ್ವಿಟರ್ ಇಂಡಿಯಾದ ಸಾರ್ವಜನಿಕರು, ನಿಯಮಾವಳಿ ಮತ್ತು ಸರ್ಕಾರ ವಿಭಾಗದ ಮುಖ್ಯಸ್ಥೆ ಮಹಿಮಾ ಕೌಲ್, “ಸಾರ್ವಜನಿಕರು ಇಷ್ಟೊಂದು ಆಸಕ್ತಿಯಿಂದ ನೂತನ ಸಚಿವರ ನೇಮಕದ ಕುರಿತು ಚರ್ಚೆ ನಡೆಸುವುದು ಮತ್ತು ವ್ಯವಸ್ಥೆಯಲ್ಲಿ ಪಾರದರ್ಶಕತೆಗೆ ಪ್ರೇರಣೆ ನೀಡುವುದು ಖುಷಿಯ ವಿಚಾರ,” ಎಂದಿದ್ದಾರೆ. ವಿಶ್ವದಾದ್ಯಂತ ಇರುವ ಭಾರತೀಯರು ಈ ಚರ್ಚೆಯಲ್ಲಿ ಭಾಗವಹಿಸಿದ್ದರು.
ಇಷ್ಟೊಂದು ಜನಪ್ರಿಯವಾಗಿದ್ದರೂ, 328 ಮಿಲಿಯನ್ ಬಳಕೆದಾರರನ್ನು ಹೊಂದಿರುವ ಟ್ವಿಟರ್ ಆದಾಯ ವರ್ಷದ ದ್ವಿತೀಯಾರ್ಧದಲ್ಲಿ 5% ಇಳಿಕೆ ಕಂಡು 574 ಮಿಲಿಯನ್ ಡಾಲರ್ ನಲ್ಲಿ ನಿಂತಿದೆ!.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.