ಕ್ಸಿಯಾಮೆನ್: ಬ್ರಿಕ್ಸ್- ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು 2017 ರ ಬ್ರಿಕ್ಸ್ ಸಮಾವೇಶದಲ್ಲಿ ಭಯೋತ್ಪಾದನೆಯಿಂದ ಈ ಪ್ರದೇಶದ ರಕ್ಷಣಾ ಪರಿಸ್ಥಿತಿಗೆ ಉಂಟಾಗಿರುವ ಅಪಾಯದ ಕುರಿತು ಆತಂಕ ವ್ಯಕ್ತಪಡಿಸಿವೆ. ಅಲ್ಲದೆ, ಅಲ್- ಖೈದಾ, ತಾಲಿಬಾನ್ ಮತ್ತು ಪಾಕಿಸ್ಥಾನದಲ್ಲಿ ನೆಲೆಯೂರಿರುವ ಉಗ್ರ ಸಂಘಟನೆಗಳಾದ ಜೈಷ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೋಯ್ಬಾ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಜಂಟಿ ಹೇಳಿಕೆ ಹೊರಡಿಸಿವೆ.
ವಿಶ್ವಸಂಸ್ಥೆ ಭಯೋತ್ಪಾದನೆ ಕುರಿತ ಸಮಗ್ರ ಸಮಾವೇಶವನ್ನು ಏರ್ಪಡಿಸಿ, ಒಟ್ಟು 43 ಪುಟಗಳ ಕ್ಸಿಯಾಮಿನ್ ಘೋಷಣೆಗೆ ಆದಷ್ಟು ಬೇಗ ಒಂದು ಪರಿಪೂರ್ಣ ರೂಪ ಕೊಟ್ಟು ಜಾರಿಗೊಳಿಸಬೇಕು ಎಂದು ಬ್ರಿಕ್ಸ್ ದೇಶಗಳು ಕೇಳಿಕೊಂಡಿವೆ.
ಈ ಪ್ರದೇಶದ, ಅದರಲ್ಲೂ ವಿಶೇಷವಾಗಿ ಅಫ್ಘಾನಿಸ್ಥಾನ ಎದುರಿಸುತ್ತಿರುವ ರಕ್ಷಣೆಯ ಸಮಸ್ಯೆಯ ಕುರಿತು ಆತಂಕ ವ್ಯಕ್ತಪಡಿಸಿದ ದೇಶಗಳು, ತಾಲಿಬಾನ್, ಐಸ್ಐಸ್, ಅಲ್ ಖೈದಾ ಮತ್ತು ಲಷ್ಕರ್ ಇ ತೋಯ್ಬಾ, ಜೈಷ್ ಎ ಮೊಹಮ್ಮದ್, ಹಕ್ಕಾನಿ ಜಾಲ ಮತ್ತು ಇತರ ಕೆಲವು ಭಯೋತ್ಪಾದಕ ಜಾಲಗಳ ಕುರಿತು ಚರ್ಚಿಸಿದವು.
ಬ್ರಿಕ್ಸ್ ತನ್ನ ಸದಸ್ಯ ರಾಷ್ಟ್ರಗಳು, ಉಗ್ರರ ವಿರುದ್ಧ ಹೋರಾಡಲು ಮತ್ತು ಹಣಕಾಸಿನ ನೆರವು ಸಿಗದಂತೆ ಮಾಡಲು ಹೊಸ ನೀತಿಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದು ಹೇಳಿತು. ಈ ನಿರ್ಣಯದಿಂದ ಈ ಪ್ರದೇಶದಲ್ಲಿ ಭಯೋತ್ಪಾದಕತೆಯ ವಿರುದ್ಧದ ಹೋರಾಟಕ್ಕೆ ವಿಶ್ವಸಂಸ್ಥೆಯ ಇನ್ನಷ್ಟು ಬೆಂಬಲ ಸಿಗುವ ಸಾಧ್ಯತೆಯಿದೆ.
ಇದು ಭಾರತಕ್ಕೆ ವಿಶ್ವ ಮಟ್ಟದಲ್ಲಿ ದೊಡ್ಡ ಜಯವಾಗಿದ್ದರೆ, ಪಾಕ್ ಮತ್ತು ಚೀನಾ ಮುಜುಗರ ಪಡುವಂತಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.