ನವದೆಹಲಿ: ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ದೇಶದ ಶಿಕ್ಷಕರಿಗೆ ಶುಭ ಹಾರೈಸಿದ್ದಾರೆ ಮತ್ತು ‘ನವಭಾರತ’ದ ಕಲ್ಪನೆಯನ್ನು ನಿಜವಾಗಿಸುವಲ್ಲಿ ಶಿಕ್ಷಕರು ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಅವರು, ಮುಂದಿನ ಐದು ವರ್ಷಗಳಲ್ಲಿ ದೇಶಕ್ಕೆ ‘ಬದಲಾವಣೆಗೆ ಜ್ಞಾನ, ಸಬಲತೆಗಾಗಿ ಶಿಕ್ಷಣ ಮತ್ತು ಮುನ್ನಡೆಸಲು ಕಲಿಕೆ’ ಮೂಲಮಂತ್ರವಾಗಲಿ ಎಂದು ಹಾರೈಸಿದ್ದಾರೆ.
ತಮ್ಮ ಟ್ಟಟರ್ ಸಂದೇಶದಲ್ಲಿ ಪ್ರಧಾನಿ, ಯುವ ಮನಸ್ಸುಗಳನ್ನು ಪೋಷಿಸುವ ಮತ್ತು ಶಿಕ್ಷಣದ ಸಂತೋಷವನ್ನು ಹರಡುವ ಶಿಕ್ಷಕ ಸಮುದಾಯಕ್ಕೆ ವಂದನೆಗಳು. ಅಧ್ಯಾಪಕರು ಉನ್ನತ ಮಟ್ಟದ ಸಂಶೋಧನೆ ಮತ್ತು ಆವಿಷ್ಕಾರಗಳಿಂದ ಸಾಧ್ಯವಾಗಬಲ್ಲ ‘ನವಭಾರತ’ದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಬಲ್ಲರು, ಎಂದು ಹೇಳಿದ್ದಾರೆ.
On Teachers’ Day, I salute the teaching community that is devoted to nurturing minds & spreading the joys of education in society.
— Narendra Modi (@narendramodi) September 4, 2017
My tributes to Dr. S Radhakrishnan, an outstanding teacher and statesman on his birth anniversary.
— Narendra Modi (@narendramodi) September 4, 2017
Teachers have a central role in realising our dream of a ‘New India’ that is driven by cutting edge research & innovation.
— Narendra Modi (@narendramodi) September 4, 2017
Let us make the next 5 years about ‘teach to transform, educate to empower & learn to lead.’ https://t.co/4fdnDPf6lF
— Narendra Modi (@narendramodi) September 4, 2017
ಮಾಜಿ ರಾಷ್ಟ್ರಪತಿ ಡಾ. ಸರ್ವೆಪಳ್ಳಿ ರಾಧಾಕೃಷ್ಣನ್ ರನ್ನು ನೆನಪಿಸಿಕೊಂಡಿರುವ ಪ್ರಧಾನಮಂತ್ರಿ, ಅವರೊಬ್ಬ ಅತ್ಯುತ್ತಮ ಶಿಕ್ಷಕ ಹಾಗೂ ರಾಜನೀತಿಜ್ಞರಾಗಿದ್ದರು, ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.